ಆಟೋಗಳಿಗೆ ಕನ್ನಡ ಧ್ವಜ ಕಟ್ಟಿ ರಾಜ್ಯೋತ್ಸವಕ್ಕೆ ಚಾಲನೆ
ಲೋಕದರ್ಶನ ವರದಿ
ಬಳ್ಳಾರಿ 31: ಕನರ್ಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಬಳ್ಳಾರಿಯಲ್ಲಿ ಒಂದು ದಿನ ಮೊದಲೇ ಕನ್ನಡ ಪರ ಸಂಘಟನೆಯಾದ ನವಕನರ್ಾಟಕ ಯುವಶಕ್ತಿ ಸಂಘಟನೆಯ ಕಾರ್ಯಕರ್ತರು ಸಾವಿರಾರು ಧ್ವಜಗಳನ್ನು ಆಟೋಗಳಿಗೆ ಕಟ್ಟುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
ಈ ನಿಮಿತ್ತ ಬುಧವಾರದಂದು ಬೆಳಿಗ್ಗೆ 5 ಗಂಟೆಗೆ ಬಳ್ಳಾರಿಯ ಐತಿಹಾಸಿಕ ರೈಲ್ವೆನಿಲ್ದಾಣದ ಮುಂಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಆಟೋಗಳಿಗೆ ಕನ್ನಡ ಧ್ವಜವನ್ನು ಕಟ್ಟುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ನವಕನರ್ಾಟಕ ಯುವಶಕ್ತಿ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಕಳೆದ 14 ವರ್ಷಗಳಿಂದ ನಗರದಲ್ಲಿ ಸಂಚರಿಸುವ ಆಟೋಗಳಿಗೆ ಕನ್ನಡ ಧ್ವಜಗಳನ್ನು ಕಟ್ಟುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಈ ಕಾರ್ಯಕ್ಕೆ ಕಸಾಪ ಜಿಲ್ಲಾಧ್ಯಕ್ಷರಾದ ಸಿದ್ದರಾಮ ಕಲ್ಮಠ ಚಾಲನೆ ನೀಡಿ ಮಾತನಾಡುತ್ತಾ.
ಕೇವಲ ತೋರಿಕೆಗೆ ಮಾತ್ರ ಕನ್ನಡ ಬೇಡ. ಬ್ಯಾಂಕ್, ರೈಲ್ವೆ, ನ್ಯಾಯಾಲಯ ಸೇರಿದಂತೆ ರಾಜ್ಯದಲ್ಲಿರುವ ಕೇಂದ್ರ ಮತ್ತು ರಾಜ್ಯ ಸಕರ್ಾರಿ ಕಚೇರಿಗಳಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನವಕನರ್ಾಟಕ ಯುವಶಕ್ತಿಯ ರಾಜ್ಯ ಉಪಾಧ್ಯಕ್ಷರಾದ ಸಿದ್ಮಲ್ ಮಂಜುನಾಥ, ಜಿಲ್ಲಾಧ್ಯಕ್ಷರಾದ ಕೆ.ರಮೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಪ್ಪಗಲ್ ಬಿ.ಚಂದ್ರಶೇಖರ ಆಚಾರಿ, ವಿ.ರಾಮಚಂದ್ರ, ಯಮುನಪ್ಪ, ಗಿರಿಬಾಬು, ನೀಲಕಂಠ, ಇಸರ್ಾದ್ ಅಲಿ, ನಬಿ ರಸೂಲ್, ಜಗದೀಶ್, ಮಹೇಶ್, ರವಿಕುಮಾರ್, ರಾಜೇಶ್, ರಾಜಶೇಖರ, ಎಂ.ಮಂಜುನಾಥ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.