ರೈತರು ಒಗ್ಗಟ್ಟಾಗಲು ಸಾಗರ ಕರೆ
ಲೋಕದರ್ಶನ ವರದಿ
ವಿಜಯಪುರ 03: ಈ ನಾಡಿನಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗುವ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ರೈತ ಮಾತ್ರ, ಜಾತ್ಯಾತೀತವಾಗಿ ಪಕ್ಷಾತೀತವಾಗಿ ಒಂದಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಎಲ್ಲಾ ರೈತರು ಒಂದಾಗಬೇಕು, ರೈತರು ಸಾಲದಿಂದ ಮುಕ್ತಿಹೊಂದಲು ಆತ್ಮಹತ್ಯೆಯಿಂದ ಹೊರಬರಲು ಡಾ. ಎಂ.ಎಸ್ ಸ್ವಾಮಿನಾಥನ ವರದಿ ಜಾರಿಯಾಗಬೇಕು, ಅದಕ್ಕಾಗಿ ಎಲ್ಲಾ ರೈತರು ಒಂದಾಗಿ ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡಿದರು
ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಅವರು ಮಾತನಾಡುತ್ತಾ, ಈ ಬಾಗದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ರೈತರಿದ್ದಿರಿ, ಕಬ್ಬಿಗೆ ಕಳೆದ ಹಲವಾರು ವರ್ಷಗಳಿಂದ ನ್ಯಾಯಯುತವಾದ ಬೆಲೆ ಸಿಕ್ಕಿಲ್ಲ, ಅದಕ್ಕಾಗಿಯೇ ನಮ್ಮ ಗೌರವಾಧ್ಯಕ್ಷರಾದ ಶಶಿಕಾಂತ ಗುರುಜೀ ಹಾಗೂ ರಾಜ್ಯಾಧ್ಯಕ್ಷರಾದ ಚುನ್ನಪ್ಪಾ ಪೂಜೇರಿ ಅವರು ಹುಬ್ಬಳ್ಳಿಯಲ್ಲಿ ಸೆ.29 ರಂದು ಹೋರಾಟ ಕರೆದಾಗ ಅಂದಾಜು 3-4 ಲಕ್ಷ ರೈತರು ಪಾಲ್ಗೊಂಡು, ಹೋರಾಟ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರದ ಆಹಾರ ಸಚಿವರಾದ ಪ್ರಹ್ಲಾದ ಜೋಶಿ ಅವರು ದೆಹಲಿಯಲ್ಲಿ ಅ, 12 ರಂದು ಕೃಷಿ ಸಚಿವರ ಜೊತೆ ಸಭೆ ನಿಗದಿ ಮಾಡಿದ್ದಾರೆ, ಅಲ್ಲಿ ಚರ್ಚೆ ನಂತರ ಗುರ್ಲಾಪುರದಲ್ಲಿ ರಾಜ್ಯ ಸರ್ಕಾರಕ್ಕೂ ಬೇಡಿಕೆ ಇಟ್ಟು ಹೋರಾಟ ಮಾಡಬೇಕಿದೆ, ಆದ್ದರಿಂದ ಸಮಸ್ತ ರೈತರು ಒಂದಾಗಿ ನ್ಯಾಯಕ್ಕಾಗಿ ಹೋರಾಟ ಮಾಡೋಣ ಎಂದರು.