ಉಪಚುನಾವಣೆಯ ಪ್ರಯುಕ್ತ ಮತದಾರರ ಜಾಗೃತಿ ಜಾಥಾಕ್ಕೆ ಡಿಸಿ ಚಾಲನೆ
ಲೋಕದರ್ಶನ ವರದಿ
ಬಳ್ಳಾರಿ 17 : ಬರುವ ಲೋಕಸಭಾ ಉಪಚುನಾವಣೆಯ ಪ್ರಯುಕ್ತ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸುವ ಮತದಾರರ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್ ಮನೋಹರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಡಿ.ಸಿ. ಕಚೇರಿ ಆವರಣದಲ್ಲಿ ಬುಧವಾರದಂದು ಬೆಳಿಗ್ಗೆ ಬಳ್ಳಾರಿ ನಗರದಾದ್ಯಂತ ಪ್ರಮುಖ ರಸ್ತೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಸ್ವಾಯತ್ತ ಕಾಲೇಜಿನ ವಿವಿಧ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಜಾಥಾಕ್ಕೆ ಚಾಲನೆ ದೊರೆಯಿತು.
ನಗರದ ಸರಳಾದೇವಿ ಕಾಲೇಜಿನಿಂದ ಸಾವಿರಾರು ಪದವಿ ತರಗತಿಯ ವಿದ್ಯಾಥರ್ಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಜಿಲ್ಲಾಧಿಕಾರಿಗಳು ಕೆಲವು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಡಾ.ರಾಜೇಂದ್ರ ಅವರು ಮಾತನಾಡಿ ವಿದ್ಯಾಥರ್ಿಗಳು ಎಲ್ಲರಿಗೂ ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರಲ್ಲದೆ, ಮತದಾರರು ಯಾವುದೇ ಆಮೀಷಗಳಿಗೆ ಒಳಗಾಗದಂತೆ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕೆಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ.ಯು.ಅಬ್ದುಲ್ಮುತಾಲಿಬ್, ಗ್ರಂಥಪಾಲಕರಾದ ಡಾ.ಕೆಂಗಲ್ ಗೋಪಾಲರೆಡ್ಡಿ, ಮತದಾರರ ಕ್ಲಬ್ನ ಸಂಚಾಲಕರಾದ ವೈ.ಜನಾರ್ಧನರೆಡ್ಡಿ, ರೇಂಜಸರ್್ ಮತ್ತು ರೋವಸರ್್ನ ಸಂಚಾಲಕರಾದ ಕೆ.ಎನ್.ರಾಮಾಂಜನೇಯ, ಡಾ.ಹೆಚ್.ಡಿ.ಅಣ್ಣಪ್ಪಸ್ವಾಮಿ, ಎನ್.ಎಸ್.ಎಸ್ ಅಧಿಕಾರಿಗಳಾದ ಜಿ.ಕೊಟ್ರಪ್ಪ, ಸಿ.ಕಾವಲ್ಲಯ್ಯ, ಎನ್.ಸಿ.ಸಿ. ಅಧಿಕಾರಿ ಹರೀಶ್ ಗುಜ್ಜಾರ್, ಗುರುಬಸಪ್ಪ, ನಾಟಕ ವಿಭಾಗದ ಉಪನ್ಯಾಸಕ ಅಣ್ಣಾಜಿ ಕೃಷ್ಣಾರೆಡ್ಡಿ ಮತ್ತು ವಿದ್ಯಾಥರ್ಿಗಳು ಭಾಗವಹಿಸಿದ್ದರು.