ತಾಳಿಕೋಟಿ

ಕುಡಿಯುವ ನೀರಿನ ಸಮಸ್ಯೆ: 14 ಗ್ರಾಪಂ ಪಿಡಿಓಗಳ ಸಭೆ

ಕುಡಿಯುವ ನೀರಿನ ಸಮಸ್ಯೆ: 14 ಗ್ರಾಪಂ ಪಿಡಿಓಗಳ ಸಭೆ

ತಾಳಿಕೋಟಿ 06: ತಾಲೂಕಿನ 14 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸದ್ಯದ ಸ್ಥಿತಿ ಹಾಗೂ ಕೊರತೆ ಉಂಟಾದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ವರದಿ ಪಡೆಯಲು ತಹಶೀಲ್ದಾರ ಕೀರ್ತಿ ಚಾಲಕ ಹಾಗೂ ತಾಪಂ ಇಓ ಬಿ.ಆರ್‌. ಬಿರಾದಾರ ನೇತೃತ್ವದಲ್ಲಿ ಪಿಡಿಓಗಳ ಸಭೆ ನಡೆಯಿತು. 

ಬುಧವಾರ ತಹಶೀಲ್ದಾರ ಕಾರ್ಯಾಲಯ ಸಭಾಂಗಣದಲ್ಲಿ ತಾಲೂಕಿನ 14 ಗ್ರಾಮ ಪಂಚಾಯತ ಪಿಡಿಓಗಳ ಸಭೆ ಜರುಗಿತು. ಈ ಸಭೆಯಲ್ಲಿ ತಹಶೀಲ್ದಾರ ಕೀರ್ತಿ ಚಾಲಕ ಅವರು ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿರುವ ನೀರಿನ ವ್ಯವಸ್ಥೆ ಹಾಗೂ ಅಲ್ಲಿ ಮುಂದೆ ಉದ್ಭವಿಸಬಹುದಾದ ಸಮಸ್ಯೆ ಹಾಗೂ ಅದರ ಪರಿಹಾರ ಕುರಿತು ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಪಿಡಿಓಗಳ ಜೊತೆ ಚರ್ಚಿಸಿದರು. 

ಪ್ರತಿಯೊಂದು ಪಿಡಿಓ ತಮ್ಮ ತಮ್ಮ ಪಂಚಾಯತ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ವ್ಯವಸ್ಥೆ ಕುರಿತು ತಿಳಿಸಿದರು. 

ಇಲ್ಲಿಯವರೆಗೆ ಅಂಥಹ ಗಂಭೀರ ಸಮಸ್ಯೆ ಎಲ್ಲಿಯೂ ಕಂಡುಬಂದಿಲ್ಲ ಒಂದೆರಡು ಗ್ರಾಮಗಳಲ್ಲಿ ಸಮಸ್ಯೆಯಿದ್ದು, ಅದನ್ನು ನಿಯಂತ್ರಿಸಲು ಸಂಬಂಧಿಸಿದ ಪಿಡಿಓಗಳಿಗೆ ತಿಳಿಸಲಾಯಿತು. 

ಜುಲೈ 10 ರ ಒಳಗೆ ಇನ್ನೊಮ್ಮೆ ಅವರು ತಮ್ಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿರುವ ನೀರಿನ ಸ್ಥಿತಿಗತಿ ಕುರಿತು ಸಮಗ್ರ ವರದಿ ನೀಡಲು ತಹಶೀಲ್ದಾರ ಅವರು ತಿಳಿಸಿದರು. 

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಹಾಗೂ 14 ಗ್ರಾಪಂಗಳ ಪಿಡಿಓಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ