ನಾಟಕ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತದೆ: ಬೆಳಗಲಿ
ಶಿಗ್ಗಾವಿ : ನಾಟಕ ಎಂದರೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಮತ್ತು ಈ ಆಧುನಿಕ ರಂಗಭೂಮಿಯ ತಂತ್ರಾಂಶಗಳನ್ನ ಇಟ್ಟುಕೊಂಡು ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಬಂದಿರುವುದು ಅದು ವಿಶೇಷವಾಗಿ ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಟ್ರೇಶ್ ಮಾಸ್ಟರ್ ಬೆಳಗಲಿ ಹೇಳಿದರು.
ಪಟ್ಟಣದ ಸವಣೂರ ರಸ್ತೆಯಲ್ಲಿರುವ ಮಾಜಿ ಸಿ.ಎಂ. ಬಸವರಾಜ್ ಬೊಮ್ಮಾಯಿ ಸಭಾಂಗಣದಲ್ಲಿ ಕೊಪ್ಪಳದ ರಂಗದಾರ ರೆಪರ್ಟರಿ ಕಲಾತಂಡದ ವತಿಯಿಂದ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳ ಪಠ್ಯ ಆಧಾರಿತ ನಾಟಕ ಡಾ.ಚಂದ್ರಶೇಖರ್ ಕಂಬಾರ್ ಅವರ ಬೆಪ್ಪ ತಕಡಿ ಬೋಳಶಂಕರ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡ ಆನೆ ನಾಟಕೋತ್ಸವ ಸಮಾರಂಭವನ್ನು ಬಿಜೆಪಿಯ ತಾಲೂಕ ಪ್ರಧಾನ ಕಾರ್ಯದರ್ಶಿ ರೇಣುಕುನಗೌಡ ಪಾಟೀಲ್ ತಮಟೆ ನುಡಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ದೊಡ್ಡಾಟದ ವಿದ್ವಾಂಸ ಬಸವರಾಜ್ ಶಿಗ್ಗಾವಿ ಅವರು ಕಾರ್ಯಕ್ರಮದ ಕುರಿತು ಮಾತನಾಡಿ ರಂಗಭೂಮಿ ಸಮಾಜದಲ್ಲಿ ಮನುಷ್ಯ ಹೇಗೆ ಬದುಕಬೇಕೆಂದು ಕಲಿಸುತ್ತದೆ, ರಂಗಭೂಮಿ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ನಟ ತನ್ನ ವ್ಯಕ್ತಿತ್ವದ ಜೊತೆಗೆ ತನ್ನ ಚಿಂತನಾ ಕ್ರಮವನ್ನು ಬದಲಿಸಿಕೊಳ್ಳುತ್ತಾನೆ ಎಂದರು ವಿವರಿಸಿದರು
ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕೀರೇಶ್ ಕೊಂಡಾಯಿ, ಜೆ ಎಂ ಜೆ ಪಿ ಕಾಲೇಜಿನ ಉಪನ್ಯಾಸಕ ರವಿ ಸರ್ ಹಾಗೂ ಚೆನ್ನಪ್ಪ ಕನ್ನೂರ್ ಕಾಲೇಜಿನ ಉಪನ್ಯಾಸಕಿ ಸುಮಿತ್ರ ರಾಂಪುರ್ಮಠ, ಶೇಖಣ್ಣ ಜೋಳದ ಹಾಗೂ ವಿನಾಯಕ ಸಿಂಧೆ ಹಾಗೂ ಕೊಪ್ಪಳ ರಂಗದಾರ ರೆಪರ್ಟರಿ ನಿರ್ದೇಶಕರಾದಂತ ನಟ, ನಿರ್ದೇಶಕ ಲಕ್ಷ್ಮಣ ಪಿರಗಾರ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಲಾವಿದ ವೆಂಕಟೇಶ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.