ಡಾ ಅಂಬೇಡ್ಕರ ಮಹಿಳೆಯರ ಸಬಲೀಕರಣಕ್ಕೆ ದುಡಿದ ಮಹಾ ಚೇತನ

ಡಾ ಅಂಬೇಡ್ಕರ ಮಹಿಳೆಯರ ಸಬಲೀಕರಣಕ್ಕೆ ದುಡಿದ ಮಹಾ ಚೇತನ

ಬಳ್ಳಾರಿ,ಡಿ.07: ಪ್ರಜಾಪ್ರಭುತ್ವದ ಬಲವಾದ ಪ್ರತಿಪಾದಕರಾಗಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ಶೋಷಿತ, ದಮನಿತರಿಗೆ ಸಾಮಾಜಿಕ ನ್ಯಾಯ ಹಾಗೂ ದೇಶದ ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ಅವಿಶ್ರಾಂತವಾಗಿ ದುಡಿದ ಮಹಾನ್ ಚೇತನ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಬಿ ಕೆ ತುಳಸಿಮಾಲ ಅವರು ತಿಳಿಸಿದರು.ಅವರು ನಗರದ ಈಜುಕೊಳದ ಸಮುಚ್ಛಯದ ಸಭಾಂಗಣದಲ್ಲಿ ಕನರ್ಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ಆರ್ ಪಿ ಐ ಜಿಲ್ಲಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರ 62 ನೇ ಮಹಾ ಪರಿನಿವರ್ಾಣ ದಿನಾಚರಣೆಯಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು. ಮಹಿಳೆಯರ ಸಬಲೀಕರಣಕ್ಕಾಗಿ ಸಂಸತ್ತಿನಲ್ಲಿ ಮಂಡಿಸಿದ ಹಿಂದುಕೋಡ್ ಬಿಲ್ಗೆ ಬೆಂಬಲ ದೊರೆಯದಿದ್ದಾಗ ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಹನೀಯರು ಎಂದು ಕೊಂಡಾಡಿದರು. ಜಡ್ಡುಗಟ್ಟಿದ ಧಾಮರ್ಿಕ ಮೌಡ್ಯ ಆಚರಣೆಗಳನ್ನು ಕಟು ಟೀಕಕಾರರಾಗಿದ್ದ ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ವಿಚಾರ, ಆಚರಣೆಗಳಿಗೆ ಆದ್ಯತೆ ನೀಡಿದರು ಎಂದು ಹೇಳಿದರು. ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಅಂಬೇಡ್ಕರ ಅವರು ದೇಶಕ್ಕೆ ನೀಡಿದ್ದಾರೆ. ಎಲ್ಲರ ಅಭಿವೃದ್ಧಿಗೆ, ಸಬಲೀಕರಣಕ್ಕೆ ಪೂರಕವಾಗಿರುವ ಅಂಶಗಳು ಸಂವಿಧಾನದಲ್ಲಿದೆ. ದೇಶದ ಆಥರ್ಿಕ ಅಭಿವೃದ್ಧಿ, ಆಥರ್ಿಕ ಸುಸ್ಥಿರತೆಗೆ ಅಂಬೇಡ್ಕರ್ ಚಿಂತನೆಗಳು ಪೂರಕವಾಗಿವೆ ಎಂದು ಅಭಿಪ್ರಾಯ ಪಟ್ಟರು. ಶಿಕ್ಷಣದ ಮಹತ್ವ ಅರಿತಿದ್ದ ಬಾಬಾ ಸಾಹೇಬರು ದೇಶದ ಎಲ್ಲಾ ಜನರು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಶಿಕ್ಷಣ ಪಡೆದವರು ಮಾತ್ರ ಆಥರ್ಿಕ ಬಲವರ್ಧನೆ ಸಾಧಿಸಬಲ್ಲರು ಎಂದು ಬಲವಾಗಿ ನಂಬಿದ್ದರು ಎಂದರು. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯ ಸಂಪನ್ಮೂಲಗಳನ್ನು ಗುರುತಿಸಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಗುಲ್ಬಗರ್ಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಮಾತನಾಡಿ, ಡಾ. ಅಂಬೇಡ್ಕರ್ ಅವರು ಶ್ರೇಷ್ಠ ಪತ್ರಕರ್ತರಾಗಿದ್ದರು. ಪತ್ರಕರ್ತರಾಗಿ ಮೂಕ ನಾಯಕ, ಬಹಿಷ್ಕೃತ ಭಾರತ, ಜನತಾ (ಪ್ರಬುದ್ಧ ಭಾರತ) ಮಹತ್ವದ ಪತ್ರಿಕೆಗಳನ್ನು ತಮ್ಮ ಸಾಮಾಜಿಕ ಹಾಗೂ ಸಾರ್ವಜನಿಕ ಹೋರಾಟಗಳ ಅಭಿವ್ಯಕ್ತಿಯನ್ನಾಗಿ ದುಡಿಸಿಕೊಂಡಿದ್ದರು ಎಂದು ಹೇಳಿದರು. ದೇಶದ ಮಾಧ್ಯಮ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಮನಿತರ ಪಾಲು ಶೋಚನೀಯವಾಗಿದೆ. ಈ ವರ್ಗದ ಯುವಕರು ಸೂಕ್ತ ಶಿಕ್ಷಣ, ತರಬೇತಿ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಲೋಕವನ್ನು ಪ್ರವೇಶಿಸ ಬೇಕು ಎಂದು ಕೋರಿದರು. ರಾಜ್ಯ ಸಮಿತಿ ಸದಸ್ಯ ಡಿ ಎಚ್ ಹನುಮೇಶಪ್ಪ ಪ್ರಾಥರ್ಿಸಿದರು. ವಿಭಾಗೀಯ ಸಂಚಾಲಕ ಓಂಕಾರಪ್ಪ ಕಪ್ಪಗಲ್ಲು ಸ್ವಾಗತಿಸಿದರು. ಅಧ್ಯಾಪಕ ನೆಲ್ಲುಡಿ ಲೋಕೇಶ್ ನಿರೂಪಿಸಿದರು. ಆರ್ಪಿಐ ಜಿಲ್ಲಾಧ್ಯಕ್ಷ ಎಸ್ ಎಂ ಶ್ರೀನಿವಾಸ್ ವಂದಿಸಿದರು.

 

ಸುದ್ದಿ ಓದಿ