ಹಾನಗಲ್ ಗುರು ಕುಮಾರೇಶ ರಾಷ್ಟ್ರೀಯ ಪ್ರಶಸ್ತಿಗೆ ಡಾ.ವೈ.ಎಮ್.ಯಾಕೊಳ್ಳಿ ಆಯ್ಕೆ
ಲೋಕದರ್ಶನ ವರದಿ
ಸವದತ್ತಿ 09: ಹಾನಗಲ್ ಗುರು ಕುಮಾರೇಶ ರಾಷ್ಟ್ರೀಯ ಪ್ರಶಸ್ತಿಗೆ ಸವದತ್ತಿಯ ಹಿರಿಯ ಸಾಹಿತಿ ಡಾ.ವೈ.ಎಮ್.ಯಾಕೊಳ್ಳಿಯವರು ಆಯ್ಕೆಯಾಗಿದ್ದಾರೆ.
ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಆ.28ರಂದು ಡಾ.ವಿ.ಬಿ.ಹಿರೇಮಠ ಮಹಾವೇದಿಕೆಯಲ್ಲಿ ಡಾ.ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಅಡಿಯಲ್ಲಿ ಅಶ್ವಿನಿ ಪ್ರಕಾಶನದ 35ನೇ ವರ್ಷದ ಅಂಗವಾಗಿ ನೂರು ಕೃತಿಗಳ ಸಂಭ್ರಮ ಸಾಹಿತ್ಯ ಸಮ್ಮೇಳನ ಮತ್ತು ಹಾನಗಲ್ ಗುರುಕುಮಾರೇಶ ಹಾಗೂ ಪಂಡಿತ ಪಂಚಾಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.