ಸೌಂದತ್ತಿ

ಉಚಿತ ಹೃದಯ ರೋಗ ತಪಾಸಣೆ ಶಿಬಿರ ಉದ್ಘಾಟಿಸಿದ ಡಾ. ಜೈನಾಪುರ

ಉಚಿತ ಹೃದಯ ರೋಗ ತಪಾಸಣೆ ಶಿಬಿರ ಉದ್ಘಾಟಿಸಿದ ಡಾ. ಜೈನಾಪುರ

ಮುನವಳ್ಳಿ: ಪಟ್ಟಣದ ಸ್ಪಂದನ ಆಸ್ಪತ್ರೆಯಲ್ಲಿ ಎಸ್.ಡಿ.ಎಮ್ ನಾರಾಯಣ ಹಾರ್ಟ ಸೆಂಟರ್ ಹಾಗೂ ಸ್ಪಂದನಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಬುಧವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಹೃದಯ ರೋಗ ತಜ್ಞ ಡಾ|| ರವಿ ಜೈನಾಪುರ ಮಾತನಾಡಿದರು ಆಹಾರ ವಿಹಾರ ಪದ್ದತಿಯನ್ನು ಸರಿಯಾಗಿ ಅನುಸರಿಸಬೇಕು, ಕೇವಲ ಹಣ ನೀಡಿದರೆ ಆರೋಗ್ಯ ಸಿಗದು ಹೀಗಾಗಿ ಹಣಕ್ಕಿಂತ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯ ರೋಗ ಉಲ್ಬಣಕ್ಕೂ ಮೊದಲು ವೈದ್ಯರ ಸಲಹೆ ಮೇರೆಗೆ ಸಮಯಕ್ಕೆ ಸರಿಯಾಗಿ ಔಷದೋಪಚಾರ ಮಾಡಿಕೊಂಡಲ್ಲಿ ಖಾಯಿಲೆಗಳನ್ನು ದೂರ ಮಾಡಬಹುದು, ತಮ್ಮ ನಿರ್ಲಕ್ಷದಿಂದ ವಿವಿಧ ಖಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವಶ್ಯ ಈ ಕುರಿತು ಹಲವಾರು ಶಿಬಿರಗಳನ್ನು ಆಯೋಜನೆ ಮಾಡಿ ಜೊತೆಗೆ ತಜ್ಞ ವೈಧ್ಯರ ಸಲಹೆ ಕೋಡಿಸುವ ಕೆಲಸ ಹೆಚ್ಚಾಗಬೇಕಿದೆ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಯಾವುದೆ ತರಹದ ಮುಂಜಾಗ್ರತೆವಹಿಸುತ್ತಿಲ್ಲ ಹೀಗಾಗಿ ರೋಗಕ್ಕೆ ಸಿಲುಕುತ್ತಿದ್ದಾರೆ ಸಾತ್ವಿಕ ಆಹಾರ ಬಳಸದೆ ಕೇವಲ ಜಂಕ್ ಪುಡ್ಗಳಿಗೆ ಮಾರು ಹೋಗಿ ಆರೋಗ್ಯ ನಿರ್ಲಕ್ಷ ಮಾಡುವುದು ಸರಿಯಲ್ಲ ಎಂದರು.

ಡಾ.ಹರ್ಷ ಮಮದಾಪೂರ ಮಾತನಾಡಿ ಓದು ಬರಹ ಹಾಗೂ ಪಠ್ಯ ಚಟುವಟಿಕೆಗಳಲ್ಲಿ ನಾವು ತೊಡಗಿಸಿಕೊಂಡರೆ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಮುನ್ನಡೆಯಾಗುತ್ತದೆ ಇಂದಿನ ಆದುನಿಕ ವಿದ್ಯುನ್ಮಾನ ಯುಗದಲ್ಲಿ ಮನರಂಜನೆಯ ಹಲವಾರು ಮಾಧ್ಯಮಗಳು ನಮ್ಮನ್ನು ಒಂದೇ ಕಡೆ ಕೂಡಿಸಿ ನಮ್ಮಲ್ಲಿ ಜಡತ್ವ ಆಲಸಿತನದಂತಹ ಬೇಡವಾದ ಅಂಶಗಳನ್ನು ಪರೋಕ್ಷವಾಗಿ ತುಂಬುತ್ತಿವೆ ಶಹರದ ಜೀವನವು ಯಾಂತ್ರಿಕ ಬದುಕಾಗಿದ್ದು ಇದರಿಂದ ಹೊರ ಬರಲು ಯೋಗ ವ್ಯಾಯಾಮ ಹಾಗೂ ನಡಿಗೆಯನ್ನು ಅಳವಡಿಸಿಕೊಂಡು ರೋಗದಿಂದ ದೂರವಿರಬೇಕು ಎಂದರು.

ಡಾ. ಮಹಾಂತೇಶ ಉಳ್ಳಾಗಡ್ಡಿ, ಡಾ. ಪುಷ್ಪಾ ಮಮದಾಪೂರ, ದುಂಡೇಶ ತಡಕೋಡ, ಪಂಚಪ್ಪಾ ಗೋಪಶೆಟ್ಟಿ, ನಿಕಿಲ ಬಾಳಿ, ಹಫೀಜ್ ವತ್ನಾಲ, ಹಫೀಜ್ ಒಸ್ನ, ಶಿವಾನಂದ ಗೋಪಶೆಟ್ಟಿ, ಹಸನಸಾಬ ಮಲದಾಸ್, ಚನ್ನಪ್ಪ ಮುಳನ್ನವರ, ಬಸವರಾಜ ಗೋಪಶೆಟ್ಟಿ, ನಾರಾಯಣ ಹಾರ್ಟ ಸೆಂಟರ್ ಸಿಬ್ಬಂದಿವರ್ಗ ಹಾಗೂ ಸ್ಪಂದನಾ ಆಸ್ಪತ್ರೆಯ ಸಿಬ್ಬಂದಿ ವರ್ಗ ಇತರರು ಉಪಸ್ಥಿತರಿದ್ದರು.

350 ಕ್ಕು ಹೆಚ್ಚು ಜನ ಬಿಪಿ, ಸುಗರ್, ಈಖೋ, ಇ.ಸಿ.ಜಿ, ತಪಾಸನೆ ಪಡೆದುಕೊಂಡು ಡಾ|| ಸಲಹೆ ಪಡೆದುಕೊಂಡರು.

 

ಸುದ್ದಿ ಓದಿ