ಡಾ|| ಬಿ.ಅರ್.ಅಂಬೇಡ್ಕರ್ರವರ ಪರಿನಿವರ್ಾಣದಿನ ಆಚರಣೆ

ಡಾ|| ಬಿ.ಅರ್.ಅಂಬೇಡ್ಕರ್ರವರ ಪರಿನಿವರ್ಾಣದಿನ ಆಚರಣೆ

ಬಳ್ಳಾರಿ 06: ಭಾರತ ಭಾಗ್ಯ ವಿಧಾತ ಮಹಾನ್ ಮಾನವತಾವಾದಿ ಜ್ಞಾನಸೂರ್ಯ ಬೋಧಿಸತ್ವ ದಮನಿತ, ಶೋಷಿತರ ತಂದೆ, ಯುಗಪುರುಷ, ಬಾಬಾಸಾಹೇಬ್ ಡಾ|| ಬಿ.ಅರ್.ಅಂಬೇಡ್ಕರ್ ಅವರು ನಮ್ಮನ್ನಗಲಿ ಇಂದಿಗೆ 62 ವರ್ಷ ಸಂದಿವೆ. ಅವರಿಗೆ ದಮ್ಮ ನಮನಗಳು. ಗುರುವಾರ ಅವರ ಪರಿನಿವರ್ಾಣ ದಿನವಾದ್ದರಿಂದ ಮಹಾ ಪರಿನಿಬ್ಬಣ ದಿನ ಎಂದು ಕರೆಯಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಮ್ಪ್ರಸಾತ್ ಮನೋಹರ್ ನಗರದ ಹೊಸಪೇಟೆ ರಸ್ತೆಯ ಅಂಬೇಡ್ಕರ್ ಭವನದ ಆವರಣಲ್ಲಿರುವ ಅಂಬೇಡ್ಕರ್ ಅವರ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸುತ್ತಾ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಡಾ|| ರಾಜೇಂದ್ರ, ಹಾಗೂ ಜಿ.ಪಂ. ಸದಸ್ಯರಾದ ಮಾನಯ್ಯ, ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಸದಸ್ಯರುಗಳು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಾದ ರಾಜಪ್ಪ ಉಪಸ್ಥಿತರಿದ್ದರು. ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಮಮತಾ ಅವರು ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿ ಓದಿ