ಡಾ.ವಿರೇಂದ್ರ ಹೆಗಡೆ ಅವರ ಕಾರ್ಯ ಶ್ಲಾಘನೀಯ: ದುಗ್ಗೆಗೌಡ
ಬೈಲಹೊಂಗಲ09: ರಾಜ್ಯದಲ್ಲಿರುವ 327 ಕೆರೆಗಳ ಹೂಳು ತೆಗೆದು ಮುಂದಿನ ಪೀಳಿಗೆಗೆ ಪರಿಸರದ ಜೊತೆಗೆ ನೀರಿನ ಅಂತರ್ಜಲದ ಕೊರತೆ ನೀಗಿಸುವ ಮಹಾನ ಕಾರ್ಯವನ್ನು ಮಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರ ಕಾರ್ಯ ಶ್ಲಾಘನೀಯವಾದದು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಹೇಳಿದರು.
ತಾಲೂಕಿನ ಸಾಣಿಕೊಪ್ಪ ಗ್ರಾಮದ ಕೆಂಗೇರಿಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಗಳು ಅಭಿವೃದ್ದಿ ಹೊಂದಲು ಯೋಜನೆಯ ಸ್ವಸಹಾಯ ಸಂಘಗಳು ಕಾರಣ ಸಂಘದ ಗುಣಮಟ್ಟವನ್ನು ಉಳಿಸುವದರ ಜೊತೆಗೆ ಪ್ರತಿ ಮನೆಯಲ್ಲಿ ಸಂಘಕ್ಕೆ ಸೇರುವ ಮೂಲಕ ಯೋಜನೆಯ ಲಾಭ ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಕೆಂಗೇರಿ ಸಣ್ಣ ಕೆರೆಗೆ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.612000 ಸಹಾಯಧನ ಮಂಜೂರಾಗಿದ್ದು ಸೂಕ್ತ ರೀತಿಯಲ್ಲಿ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಜಿಪಂ.ಸದಸ್ಯ ಅನಿಲ ಮೇಕಲಮರ್ಡಿ ಮಾತನಾಡಿದರು, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ತೀರ್ತಪ್ಪ ಸುಂಕದ, ಜಿಲ್ಲಾ ನಿರ್ದೇಶಕ ಪ್ರದೀಪ್ ಜಿ, ಗ್ರಾಪಂ.ಅಧ್ಯಕ್ಷ ಗಂಗವ್ವ ತಿಗಡಿ, ಮಹಾಂತಯ್ಯ ಹಿರೇಮಠ, ನಾಗಪ್ಪ ಸಂಗೊಳ್ಳಿ, ಯಲ್ಲವ್ವ ಹರಿಜನ, ಪ್ರಕಾಶ ಪಾಟೀಲ, ಚನ್ನಯ್ಯ ಹಿರೇಮಠ ಒಕ್ಕೂಟದ ಅಧ್ಯಕ್ಷÀ ಸಾವಿತ್ರಿ ಚಿಕ್ಮಟ್, ನಿಂಗರಾಜು ಇದ್ದರು.
ತಾಲೂಕಾ ಯೋಜನಾಧಿಕಾರಿ ಪುರಷೋತ್ತಮ ಸ್ವಾಗತಿಸಿದರು. ಮೇಲ್ವಿಚಾರಕಿ ವಂದನಾ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ನಿಂಗಪ್ಪ ವಂದಿಸಿದರು.