ಸಿಂಧಗಿ

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರು ಭಾರತ ಕಂಡ ಅಗ್ರಗಣ್ಯ ಶಿಕ್ಷಕ : ಫಾದರ್ ಸಂತೋಷ

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರು ಭಾರತ ಕಂಡ ಅಗ್ರಗಣ್ಯ ಶಿಕ್ಷಕ : ಫಾದರ್ ಸಂತೋಷ

ಸಿಂದಗಿ, 10 ; ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರು ಸಪ್ಟಂಬರ 05-1888 ರಲ್ಲಿ ಇವರು ಜನ್ಮ ತಾಳಿದರು ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ , ಪ್ರೀತಿ ನಿಷ್ಠೇಯನ್ನು ಹೊಂದಿದ್ದರು ಅಲ್ಲದೇ ಇವರು ಸ್ವತಃ ಶಿಕ್ಷಕರು ಆಗಿ ಹಾಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರು ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಇವರೇ ಪ್ರಮೂಖರಾಗಿದ್ದಾರೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಹೇಳಿದರು. 

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ಶಿಕ್ಷಕ ದಿನೋತ್ಸವ ಸಮಾರಂಭದಲ್ಲಿ ಮಾತನಾಡಿ,  ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು ಶಿಕ್ಷಕರಾಗಿದ್ದ ಡಾಽಽ ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾದರು ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿದ್ದರು ಒಮ್ಮೆ ರಾಧಾಕೃಷ್ಣರವರು ರಾಷ್ಟ್ರಪತಿಯಾದಾಗ ಅವರ ಕೆಲವು ವಿದ್ಯಾರ್ಥಿಗಳು ಸಪ್ಟಂಬರ್ 05 ರಂದು ಅವರ ಜನ್ಮ ದಿನವನ್ನು ಆಚರಿಸಲು ಅವಕಾಶ ನೀಡುವಂತೆ ವಿನಂತಿಸಿ ನನ್ನ ಜನ್ಮದಿನವನ್ನು ಆಚರಿಸುವ ಬದಲು ಸೆಪ್ಟಂಬರ್ 05 ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಅದು ನನ್ನಹೆಮ್ಮೆ ಮತ್ತು ನಮ್ಮ ಸೌಭಾಗ್ಯ ಎಂದು ಉತ್ತರ ನೀಡಿದರು. ಅಂದಿನಿಂದ ಇಂದಿನವರೆಗೆ ನಾವು ನೀವೇಲ್ಲರು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಅಲ್ಲದೇ ಸಂತ ಮದರ್ ತೆರೇಸಾ  ರವರು ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ ರೋಗಿಗಳ ಅನಾಥರ ಮತ್ತು ಮರಣ ಸಂಕಟದಲ್ಲಿರುವವವರ ಸೇವೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡವರು 1970ರ ವೇಳೆಗೆ ಇವರು ಒಬ್ಬ ಮಾನವತವಾದಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು ಅಲ್ಲದೆ ಅಸಹಾಯಕರ ಪರ ಪ್ರಬಲ ಪ್ರತಿಪಾದಕರಾಗಿದ್ದರು. ಇವರು 05 ಸಪ್ಟಂಬರ್ 1997 ರಲ್ಲಿ ಇಹಲೋಕ ತೇಜಿಸಿದರು. ಎಂದರು.  

ಎ ಆರ್ ಟಿ ಸೇಂಟರಿನ ಮಕ್ಕಳ ಮೇಲ್ವೀಚಾರಕಿ ನಾಗರತ್ನ ತಿಳಗೂಳ ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿಗಳಾಗ ಕುಮಾರ ಭಾಗಣ್ಣ ಕುಂಬಾರ ಇವರು ಕಾರ್ಯಕ್ರಮದಲ್ಲಿ ಅಥಿತಿಗಳ ಸ್ಥಾನವಹಿಸಿಕ್ಕೊಂಡಿದ್ದರು. ಹಾಗೂ ಇ ಕಾರ್ಯಕ್ರಮದಲ್ಲಿ ವಿವಿದ ಹಳ್ಳಿಗಳಿಂದ ಮಕ್ಕಳು ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ವಿಜಯ ಬಂಟನೂರ ಸ್ವಾಗತ ಮಹೇಶ ಛವ್ಹಾಣ ಕಾರ್ಯಕರ್ತರಾದ ಸುಜಾತರವರು ವಂದಿಸಿದರು. 


ಸುದ್ದಿ ಓದಿ