ರಾಕೇಶ ದೊಡ್ಡಣ್ಣವರಗೆ ಡಾ. ಎಸ್.ಡಿ. ಭೋಮಜ ಸ್ಮಾರಕ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಕಾಗವಾಡ 17: ಸಮೀಪದ ಮಿರಜ ಪಟ್ಟಣದ ಸುಪ್ರಸಿದ್ಧ ಶಾಂತಿಸರೋಜ ನೇತ್ರಾಲಯದಿಂದ ಕೊಡಮಾಡುವ ಡಾ. ಎಸ್.ಡಿ. ಭೋಮಜ ಸ್ಮಾರಕ ಪ್ರಶಸ್ತಿಯು ಸನ್ 2026ನೇ ಸಾಲಿಗೆ ಹೆಸರಾಂತ ಪರಿಸರವಾಗಿ ಸಾಂಗಲಿಯ ರಾಕೇಶ ದೊಡ್ಡಣ್ಣವರ ಅವರಿಗೆ ಲಭಿಸಿದೆ.
ಶನಿವಾರ ದಿ. 14 ರಂದು ಮಿರಜ ಪಟ್ಟಣದ ಶಾಂತಿಸರೋಜ ನೇತ್ರಾಲಯವು ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ 16 ನೇ ವಾರ್ಷಿಕೋತ್ಸವ ನಿಮಿತ್ಯ ನಡೆದ ಸರಳ ಸಮಾರಂಭದಲ್ಲಿ ಸಾಂಗಲಿ ನಗರದ ಪರಿಸರವಾದಿ ರಾಕೇಶ ದೊಡ್ಡಣ್ಣವರ ಮಾಡಿರುವ ಶೈಕ್ಷಣಿಕ, ಸಾಮಾಜಿಕ ಮತ್ತು ಪರಿಸರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಗಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು. ಈ ಪ್ರಶಸ್ತಿಯು ಪ್ರಮಾಣ ಪತ್ರದೊಂದಿಗೆ ನಗದು ಒಳಗೊಂಡಿದೆ.
ಶಾಂತಿಸರೋಜ ನೇತ್ರಾಲಯದ ನಿರ್ದೇಶಕ ಡಾ. ಶರದ ಭೋಮಜ ಮಾತನಾಡಿ, ಪ್ರಸ್ತುತ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ನಮ್ಮ ಮೇಲೆ ಅದರಿಂದಾಗುವ ದೂರಗಾಮಿ ಪರಿಣಾಮ ಇದರೆಲ್ಲರದರ ಮಧ್ಯೆ ಪರಿಸರ ಜಾಗೃತಿ, ಪರಿಸರ ರಕ್ಷಣೆಗಾಗಿ ರಾಕೇಶ ದೊಡ್ಡಣ್ಣವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಡಾ. ಪೂಜಾ ಭೋಮಜ ಮಾತನಾಡಿ, ರಾಕೇಶ ದೊಡ್ಡಣ್ಣವರ ಅವರ ಪರಿಸರ ಪ್ರೇಮ ನಿರಂತರವಾಗಿ ನಡೆಯಲಿ. ಅವರ ಭವೊಷ್ಯದ ಪ್ರಯತ್ನಗಳಿಗೆ ಶುಭವಾಗಲಿ ಎಂದರು ಹಾರೈಸಿದರು.
ಶಾಂತಿಸರೋಜ ನೇತ್ರಾಲಯದ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.