ಶಿಗ್ಗಾವ್

ಡಾ.ರಾಜ್ ಪುಣ್ಯಸ್ಮರಣೆ ರಾಜ್ ಮರೆಯಲಾಗದ ವ್ಯಕ್ತಿ: ಆನಂದಗೌಡ

ಡಾ.ರಾಜ್ ಪುಣ್ಯಸ್ಮರಣೆ ರಾಜ್ ಮರೆಯಲಾಗದ ವ್ಯಕ್ತಿ: ಆನಂದಗೌಡ

ಲೋಕದರ್ಶನ ವರದಿ

ಶಿಗ್ಗಾವಿ 12: ದಿ. ಡಾ.ರಾಜ್ಕುಮಾರ್ ಒಂದಲ್ಲ ಒಂದು ಕಾರಣಗಳಿಗೆ ನಮಗೆ ನೆನಪಾಗುತ್ತಿರುತ್ತಾರೆ. ಅವರ ವ್ಯಕ್ತಿತ್ವವೇ ಅಂತಹದ್ದು. ಅವರು ಚಲನಚಿತ್ರರಂಗ ಕಂಡ ಅಪರೂಪದ ಹಾಗೂ ಮರೆಯಲಾಗಿದ ವ್ಯಕ್ತಿ ಎಂದು ದಾಸನೂರ ಸಮೂಹ ಸಂಸ್ಥೆಯ ನಿದರ್ೇಶಕ ಆನಂದಗೌಡ ಪಾಟೀಲ ಹೇಳಿದರು.

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ಗಾರ್ಡನ್ನ ರಾಜ್ ಸರ್ಕಲ್ನಲ್ಲಿ ಉತ್ಸವ ರಾಕ್ಗಾರ್ಡನ್ ಸಮಿತಿ ಬುಧವಾರ ಆಯೋಜಿಸಿದ್ದ ಡಾ.ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಣ್ಣಾವ್ರು ನಮ್ಮನಗಲಿ 17 ವರ್ಷಗಳಾದವು. ಇಂದಿಗೂ ಅವರು ನಮ್ಮೊಂದಿಗಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣ ಅವರ ಸರಳ ಸಜ್ಜನಿಕೆ, ವಿಭಿನ್ನ ಪಾತ್ರಗಳು ಹಾಗೂ ಅದ್ಭುತ ಅಭಿನಯ. ಹೀಗೆ ಒಂದಲ್ಲ ಒಂದು ಕಾರಣದದಿಂದ ಎಲ್ಲರಿಗೂ ರಾಜ್ ನೆನಪಾಗುತ್ತಾರೆ ಎಂದು ಆನಂದಗೌಡ ಪಾಟೀಲ ನುಡಿದರು.

ರಾಜ್ಸರ್ಕಲ್ನಲ್ಲಿರುವ ಅವರ ಸತ್ಯಹರಿಶ್ಚಂದ್ರ ಶಿಲ್ಪಕ್ಕೆ ಕಲಾವಿದರು ಪೂಜೆ ಸಲ್ಲಿಸಿದರು. ಮಾಲತೇಶ ಕೂಡಲ, ಅಭಿಷೇಕ ಮಲ್ಲಾರಿ, ಚಂದ್ರು ಲಾಬಗೊಂಡ, ಮಂಜು ಇಂದೂರ, ಬಸವರಾಜ ಚೆಳ್ಳಪ್ಪನವರ, ಮಂಜುನಾಥ ಸೂರಗೊಂಡ ಮತ್ತಿತರರು ಭಾಗವಹಿಸಿದ್ದರು 

ಸುದ್ದಿ ಓದಿ