ಚಿಕ್ಕೋಡಿ

ಡಾ. ಪ್ರಭಾಕರ ಕೋರೆ ಅವರ ಕಾರ್ಯ ಶ್ಲಾಘನೀಯ: ಡಾ. ಎಸ್‌. ಜೈಶಂಕರ..!

ಡಾ. ಪ್ರಭಾಕರ ಕೋರೆ ಅವರ ಕಾರ್ಯ ಶ್ಲಾಘನೀಯ: ಡಾ. ಎಸ್‌. ಜೈಶಂಕರ..!

ಕೆಎಲ್‌ಇ ಶಿಕ್ಷಣ ಸಂಸ್ಥೆಯ ಮುಖಾಂತರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ  

ಮಾಂಜರಿ 28: ದೇಶದ ನಾಗರೀಕರ ಶೈಕ್ಷಣಿಕ ಗುಣಮಟ್ಟದ ಮೇಲೆ ಆ ದೇಶದ ಪ್ರಗತಿ ನಿಂತಿರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಜಗತ್ತೇ ನಮ್ಮ ದೇಶವನ್ನು ತಿರುಗಿ ನೋಡುವಂತಾಗಿದ್ದರೇ ಅದಕ್ಕೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯೇ ಕಾರಣವಾಗಿದೆ. ಅದರಂತೆಯೇ ಗ್ರಾಮೀಣ ಭಾಗದಲ್ಲಿ ಮೌಲ್ಯಯುತ ಶಿಕ್ಷಣದ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಕಾಂತ್ರಿ ಮಾಡಿರುವ ಡಾ. ಪ್ರಭಾಕರ ಕೋರೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆಂದು ವಿದೇಶಾಂಗ ಸಚಿವರಾದ ಪದ್ಮಶ್ರೀ ಡಾ. ಎಸ್‌. ಜೈಶಂಕರ ಹೇಳಿದ್ದಾರೆ.   

ಅವರು ಬುಧವಾರಿ ದಿ. 28 ರಂದು ಚಿಕ್ಕೋಡಿ ಪಟ್ಟಣದಲ್ಲಿ ಕೆಎಲ್‌ಇ ಸಂಸ್ಥೆಯ ನೂತನ ಸಿಬಿಎಸ್‌ಇ ಶಾಲೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸುಶಾಸನ ಮತ್ತು ದೂರದೃಷ್ಟಿಯ ಫಲದಿಂದ ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಸ್ವಾತಂತ್ರ್ಯದ ಅಮೃತಕಾಲದಲ್ಲಿ ನಾವೆಲ್ಲರೂ ಹೆಮ್ಮೆಯಿಂದ ಹೆಜ್ಜೆ ಹಾಕವಂತಾಗಿದೆ. ನರೇಂದ್ರ ಮೋದಿಯವರು ಹಾಕಿರುವ ಪ್ರಗತಿಯ ಭದ್ರ ಬುನಾದಿಯಿಂದ ದೇಶ ಎತ್ತರೆತ್ತರಕ್ಕೆ ಏರುವ ಅವಕಾಶ ಒದಗಿದ್ದು, ನಾವೆಲ್ಲರೂ ದೇಶದ ಪ್ರಗತಿಗಾಗಿ ಸಹಕರಿಸುವ ಅವಶ್ಯಕತೆ ಇದೆ ಎಂದರು.  

ತಾವು ಚಿಕ್ಕೋಡಿ ಪಟ್ಟಣದಲ್ಲಿ ಮೊಟ್ಟ ಮೊದಲಬಾರಿಗೆ ತಮ್ಮ ಕರ್ತವ್ಯ ಪ್ರಾರಂಭಿಸಿರುವುದನ್ನು ಮೆಲಕು ಹಾಕಿದರು. ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಇಲ್ಲದಿದ್ದರೇ ನಾವ್ಯಾರೂ ಡಿಗ್ರಿ ಮಾಡಲು ಸಾಧ್ಯವಿರಲಿಲ್ಲ. ಕೆಎಲ್‌ಇ ಸಂಸ್ಥೆಯನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸುವಲ್ಲಿ ಡಾ. ಪ್ರಭಾಕರ ಕೋರೆ ಅವರ ಪರಿಶ್ರಮ ಬಹಳವಿದೆ ಎಂದರು.  

ವೇದಿಕೆಯ ಮೇಲೆ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಕೆಎಲ್‌ಇ ಸಂಸ್ಥೆಯ ಸದಸ್ಯರಾದ ಡಾ. ವ್ಹಿ.ಎಸ್‌. ಸಾಧುನವರ, ಕೆಎಲ್‌ಇ ಆಡಳಿಯ ಮಂಡಳಿಯ ಕಾರ್ಯದರ್ಶಿ ಡಾ. ಬಿ.ಜಿ. ದೇಸಾಯಿ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಉಪಸ್ಥಿತರಿದ್ದರು.  

ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ, ಚಾಲನೆ ನೀಡಿದರು. ಕೆಎಲ್‌ಇ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ನಂತರ ಆಗಮಿಸಿದ್ದ ಎಲ್ಲ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಡಾ. ಪ್ರಭಾಕರ ಕೋರೆಯವರು ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು.  

 ಮಹಾಂತೇಶ ಕವಟಗಿಮಠ, ರಾಜು ಮುನವಳ್ಳಿ, ಬಿ.ಆರ್‌. ಪಾಟೀಲ, ಡಾ. ವ್ಹಿ.ಎಸ್‌. ಪಾಟೀಲ, ಜಗದೀಶ ಕವಟಗಿಮಠ, ಡಾ. ಪ್ರೀತಿ ದೊಡವಾಡ, ಮಲ್ಲಿಕಾರ್ಜುನ ಕೋರೆ, ಭರತೇಶ ಬಣವನೆ, ಸೋಮಶೇಖರ ಕೋಠಿವಾಲೆ, ಅಮರ ಬಾಗೇವಾಡಿ, ತಾತ್ಯಾಸಾಬ ಕಾಟೆ, ಅಣ್ಣಾಸಾಬ ಪಾಟೀಲ, ಮಹಾವೀರ ಕಾತ್ರಾಳೆ, ಮಲ್ಲಪ್ಪಾ ಮೈಶಾಳೆ, ಅಣ್ಣಾಸಾಹೇಬ ಇಂಗಳೆ ಸೇರಿದಂತೆ ಸಿಬಿಕೆಎಸ್‌ಎಸ್ ಕಾರ್ಖಾನೆಯ ಎಲ್ಲ ನಿರ್ದೇಶಕರು, ಚಿಕ್ಕೋಡಿ ಪುರಸಭೆಯ ಸದಸ್ಯರು, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಡಾ. ಪ್ರಭಾಕರ ಕೋರೆ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಕೆಎಲ್‌ಇ ಸಿಬ್ಬಂದಿ ವರ್ಗದವರು, ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚೇತನ ಅಳವನ್ನವರ ವಂದಿಸಿದರು. 


ಸುದ್ದಿ ಓದಿ