ಡಾ. ಕಿರಣ ಕಮಲ ಪ್ರಸಾದಗೆ ಸನ್ಮಾನ
ಶಿಗ್ಗಾವಿ 29: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಡಾ. ಕಿರಣ ಕಮಲ ಪ್ರಸಾದ ರವರಿಗೆ ಬೆಂಗಳೂರು ಗಣ್ಯರ ಸಮ್ಮುಖದಲ್ಲಿ ಪೆಡೆರೇಷನ ಆಫ್ ಕೊಂಕಣಿ ಕ್ಯಾಥೋಲಿಕ ಸಂಸ್ಥೆ ವತಿಯಿಂದ ನಡೆದ 25ನೇ ಬೆಳ್ಳಿಹಬ್ಬ ಆಚರಣೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಮಾನ್ಯ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಮಾನ್ಯ ಇಂಧನ ಸಚಿವ ಕೆ ಜೆ ಜಾರ್ಜ್, ಹಾವೇರಿ ಜಿಲ್ಲಾ ಜೀತ ವಿಮುಕ್ತಿಯ ಸಂಚಾಲಕ ಸುರೇಶ ಹರಿಜನ, ತಾಲೂಕು ಕಾರ್ಯದರ್ಶಿ ಸುರೇಶ ಬಡಪ್ಪನವರ ಮತ್ತು ತಾಲೂಕಿನ ಸಂಘಟನಾ ಕಾರ್ಯದರ್ಶಿ ಈಳಗೇರ, ಸೇರಿದಂತೆ ಇತರರು ಉಪಸ್ಥಿತರಿದ್ದರು.