ಸಚಿವ ಈಶ್ವರಪ್ಪನವರದು ಯಾವ ಶಿಸ್ತಿನ ಪಕ್ಷ: ಡಾ: ಕುಬೇರಪ್ಪ
ರಾಣೇಬೆನ್ನೂರು 17: ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಹಿರಿಯ ನಾಯಕರು ಮಾತೆತ್ತಿದರೆ ನಮ್ಮದು ಶಿಸ್ತಿನ ಪಕ್ಷ ಎಂದು ಮಾಧ್ಯಮದಲ್ಲಿ ಬೊಗಳೆ ಬಿಡುತ್ತಾರೆ. ರಾಜ್ಯದ ಆಳುವ ಪಕ್ಷ ಇಷ್ಟೆಲ್ಲಾ ಗಬ್ಬೆದ್ದು ನಾರುತ್ತಿದ್ದರೂ ಸಹಿತ, ಬಿಜೆಪಿ ಹಿರಿಯ ಮುಖಂಡ ಈಶ್ವರ್ಪನವರು ನಮ್ಮದು ಶಿಸ್ತಿನ ಪಕ್ಷ ಎಂದು ಮಾಧ್ಯಮದಲ್ಲಿ ಹೇಳುತ್ತಾರೆ. ಇವರಿಗೆ ಒಂದಿಷ್ಟಾದರೂ ನೈತಿಕತೆ ಇದ್ದರೆ ಇಂತಹ ಆತ್ಮ ವಂಚಕ ಕೆಲಸ ಮಾಡುತ್ತಿರಲಿಲ್ಲವೆಂದು ಕೆ.ಪಿ.ಸಿ.ಸಿ ಶಿಕ್ಷಕರು ಹಾಗೂ ಪದವೀಧರರು ಘಟಕದ ರಾಜ್ಯಾಧ್ಯಕ್ಷ ಡಾ: ಆರ್.ಎಂ. ಕುಬೇರ್ಪ ಖಂಡಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಯತ್ನಾಳ್‌ರವರು ಬಹಿರಂಗವಾಗಿ ಯಡಿಯೂರ್ಪನವರು ಭ್ರಷ್ಟರಿದ್ದಾರೆ. ಅವರ ಮಗ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಾ ಹಣ ಮಾಡುತ್ತಿದ್ದಾನೆ. ಎಂದು ಹೇಳುತ್ತಿದ್ದಾರೆ. ಹಾಗೂ ಅವರೇ ಮುಖ್ಯ ಮಂತ್ರಿಯ ರಾಜೀನಾಮೆ ಕೇಳುತ್ತಿದ್ದಾರೆ. ಸಚಿವ ಸಿ.ಪಿ. ಯೋಗಿಶ್ವರ ರಾಜ್ಯದಲ್ಲಿ ಆಳುವ ಪಕ್ಷ 3 ಪಕ್ಷಗಳ ಸಮ್ಮಿಶ್ರ ಸರಕಾರವೆಂದು ಮಾಧ್ಯಮದಲ್ಲಿ ಹೇಳುತ್ತಾರೆ. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ, ಸಚಿವ ಸಿ.ಪಿ. ಯೋಗೀಶ್ವರ ಒಬ್ಬ ಕಡು ಭ್ರಷ್ಠ ಅವನ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಲು ಒತ್ತಾಯ ಮಾಡುತ್ತಾರೆ. ಅಷ್ಟೇ ಅಲ್ಲದೆ ರೇಣುಕಾಚಾರಿ ಮುಖ್ಯಮಂತ್ರಿ ಪರ 65 ಜನ ಶಾಸಕರ ಸಹಿ ಮಾಡಿಸಿರುವುದು. ಸತ್ಯವೆಂದು ನಡು ರಸ್ತೆಯಲ್ಲೇ ಹೇಳುತ್ತಾರೆ, ಶಾಸಕ ಅರವಿಂದ ಬೆಲ್ಲದ್ ದೆಹಲಿಗೆ ಭೆಟ್ಟಿ ನೀಡಿ ಮುಖ್ಯಮಂತ್ರಿ ತೆಗೆದು ಹಾಕಲು ಪ್ರಯತ್ನಿಸುತ್ತಿರುವುದೆಲ್ಲಾ ನಿಮ್ಮ ಪಕ್ಷ ಶಿಸ್ತಿನ ಪಕ್ಷ ಎಂದು ಸರ್ಟಿಫಿಕೇಟ್ ನೀಡುತ್ತೀರಲ್ಲಾ ಮಾನ್ಯ ಈಶ್ವರ್ಪನವರೇ ಇದು ಯಾವ ಶಿಸ್ತಿನ ಪಕ್ಷ ದಯವಿಟ್ಟು ರಾಜ್ಯದ ಜನತೆಗೆ ತಿಳಿಸಿ ಹೇಳಬೇಕು ಎಂದು ಡಾ. ಕುಬೇರ್ಪ ಒತ್ತಾಯಿಸಿದ್ದಾರೆ.
ದೇಶಕ್ಕೆ ಸುಳ್ಳು ಹೇಳುವ ಪ್ರಧಾನ ಮಂತ್ರಿ, ಕಟುಕ ಅಮಿತ್‌ಶಾ, ಭ್ರಷ್ಠ ಮುಖ್ಯಮಂತ್ರಿ, ಅಸಮರ್ಥ ಸಚಿವರು, ಕೈಗೊಂಬೆ ಪಕ್ಷಾಧ್ಯಕ್ಷ, ಇದೇನಾ ನಿಮ್ಮ ಶಿಸ್ತು? ಇನ್ನಾದರೂ ಆತ್ಮವಂಚನೆಯ ಕೆಲಸ ಬಿಡಬೇಕೆಂದು ಡಾ: ಕುಬೇರ್ಪ ನೆನೆಪು ಮಾಡಿಕೊಟ್ಟಿದ್ದಾರೆ.