ಬಳ್ಳಾರಿ

ಅಪಾರ ಕೊಡುಗೆ ನೀಡಿದ ನಾಯಕ ಡಾ.ಬಾಬು ಜಗಜೀವನ ರಾಮ್‌:ಕೆಂಚಪ್ಪ

ಅಪಾರ ಕೊಡುಗೆ ನೀಡಿದ ನಾಯಕ ಡಾ.ಬಾಬು ಜಗಜೀವನ ರಾಮ್‌:ಕೆಂಚಪ್ಪ

ಬಳ್ಳಾರಿ 05: ಡಾ.ಬಾಬು ಜಗಜೀವನ ರಾಮ್ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರಾಗಿದ್ದಾರೆ’ ಎಂದು ಡಾ.ಬಾಬು ಜಗಜೀವನ ರಾಮ್ ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ  ಎಚ್, ಕೆಂಚಪ್ಪ ಹೇಳಿದರು. 

   ನಗರದ ನಲ್ಲಚರು ಪ್ರದೇಶದಲ್ಲಿರುವ  ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಡಾ.ಬಾಬು ಜಗಜೀವನ ರಾಮ್ ಜನ ಜಾಗೃತಿ ವೇದಿಕೆ ಮತ್ತು ಸಮುದಾಯದವರ  ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ 116ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.  

    ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಡಾ.ಬಾಬು ಜಗಜೀವನ ರಾಮ್ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ​‍್ಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು ಎಂದು ಹೇಳಿದರು.  

   ಈ ವೇಳೆ ಸಮುದಾಯದ ಮುಖಂಡರು, ಡಾ.ಬಾಬು ಜಗಜೀವನ ರಾಮ್ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಬಾಬುಜಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಚ್‌. ಕೆಂಚಪ್ಪ ಉಪಾಧ್ಯಕ್ಷ ಕುರುವಳ್ಳಿ ಬಾಬು, ಬಿ. ಎಸ್‌. ಗಂಗಾಧರ, ಭೀಮಲಿಂಗಪ್ಪ, ಅರುಣಾಚಲಂ ವೈ, ಎಚ್‌. ಎಸ್‌. ಗಾದಿಲಿಂಗ, ರಾಮಾಂಜನಿ, ಧನಂಜಯ, ಮಲ್ಲಿನಾಥ್, ಬೈಲೂರು ಗಾದಿಲಿಂಗ, ಲಕ್ಷ್ಮಣ ಭಂಡಾರಿ, ಹಾಗೂ  ಸಮುದಾಯದ ಮುಖಂಡರು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ