ಡಾ.ಅಂಬೇಡ್ಕರ್ ಭವ್ಯ ಭಾರತದ ನಿರ್ಮಾಣದತ್ತ ಗಮನ ಹರಿಸಿದ್ದರು: ರಘುನಂದಜೀ
ಚಿಕ್ಕೋಡಿ: ಅಸಮಾನತೆ-ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ತಿದ್ದುವುದರ ಜೊತೆಗೆ ಭವ್ಯ ಭಾರತದ ನಿರ್ಮಾಣದತ್ತ ಗಮನ ಹರಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರನಾಯಕರಾಗಿದ್ದರು ಎಂದು ಪ್ರಜ್ಞಾವಾಹ ಕ್ಷೇತ್ರ ಸಂಯೋಜಕ ರಘುನಂದಜೀ ಹೇಳಿದರು.ಇಲ್ಲಿನ ಕೇಶವ ಕಲಾಭವನದಲ್ಲಿ ಚಿಕ್ಕೋಡಿಯ ಸಾಮರಸ್ಯ ವೇದಿಕೆಯು ಸಂವಿಧಾನ ಶಿಲ್ಪಿ ರಾμÀ್ಟ್ರನಾಯಕ ಡಾ.ಬಿ.ಆರ್..ಅಂಬೇಡ್ಕರ್ ಅವರ 130ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರನಾಯಕ ಬಿ.ಆರ್.ಅಂಬೇಡ್ಕರ ವಿಷಯದ ಮೇಲೆ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ನಾವಿಂದು ಅಂಬೇಡ್ಕರ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಮಾಡಿಕೊಂಡಿದ್ದೇವೆ ಎಂದರು.
ನಮ್ಮ ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಕೂಡಾ ಪ್ರಮುಖರು. ಮಹಿಳೆಯರ ಪ್ರಗತಿ, ಸಮಾಜದ ಏಳಿಗೆಯ ಕನಸು ಕಂಡಿದ್ದ ಅಂಬೇಡ್ಕರ್ ಅವರು ಜೀವನದ ಕೊನೆಯ ತನಕ ಸಮಾಜದ ಉನ್ನತಿಗಾಗಿ ಕೆಲಸ ಮಾಡಿದ್ದರು. ಸಂವಿಧಾನ ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತಂದವರು ಆದ್ದರಿಂದ ಪ್ರತಿಯೊಬ್ಬರು ಅಂಬೇಡ್ಕರ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಿಗೊಳಿಸದೇ ಪ್ರತಿಯೊಬ್ಬರು ಒಪ್ಪಿಕೊಂಡು ಅವರು ಹಾಕಿಕೊಟ್ಟ ಆದರ್ಶ ಹೋರಾಟವನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದರು.
ಅಂಬೇಡ್ಕರ ಅವರ ವಿಶ್ವವೇ ಗೌರವಿಸುವಂತಹ ನಾಯಕರಾಗಿ ರೂಪುಗೊಂಡಿದ್ದರು. ಅದೆμÉ್ಟೂೀ ಜನರಿಗೆ ಸ್ಫೂರ್ತಿಯಾಗಿದ್ದರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದರು. ಹೀಗಾಗಿ ಅವರನ್ನು ನಾವಿಂದು ರಾಷ್ಟ್ರನಾಯಕರಾಗಿ ನೋಡಬೇಕಾಗಿದೆ ಎಂದರು.ಅಂಬೇಡ್ಕರ ಅವರು ಸೈನ್ಯಕ್ಕೆ ಶಕ್ತಿ ಕೊಟ್ಟಿದ್ದರು, ಕೃಷಿಕರಿಗೆ ಹೊಸ ಕೌಶಲ್ಯ ಕಲಿಸಿಕೊಡಿ ಅವರು ಆರ್ಥಿಕವಾಗಿ ಸಬಲರಾಗುತ್ತಾರೆ.ಆದರಿಂದ ಇಂದಿನ ನದಿ ಜೋಡನೆ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ್ದರು. ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಭೀಮರಾವ ನಾಡಕರ್ಣಿ ವಹಿಸಿದ್ದರು.ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ವೇದಿಕೆಯಲ್ಲಿದ್ದರು.ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವಥಪುರ,ಸತೀಶ ಅಪ್ಪಾಜಿಗೋಳ,ಸಿದ್ದಾರ್ಥ ಗಾಯಗೋಳ,ಸುರೇಶ ಕೌಜಲಗಿ,ಅಮೃತ ಕುಲಕರ್ಣಿ ಸೇರಿದಂತೆ ಕಾರ್ಯಕರ್ತರು,ಸ್ವಯಂ ಸೇವಕರು ಉಪಸ್ಥಿತರಿದ್ದರು.ಬಾಹುಬಲಿ ನಸಲಾಪೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ರಜಪೂತ ಸ್ವಾಗತಿಸಿದರು. ಅಜಯ ಉದೋಶಿ ನಿರೂಪಸಿದರು.ಪ್ರಸಾದ ಔಂದಕರ ವಂದಿಸಿದರು.