ಡಾ. ಅಂಬೇಡ್ಕರ್, ಡಾ. ಜಗಜೀವನ್ರಾಮ್ ಜನ್ಮ ದಿನಾಚರಣೆ
ಶಿಗ್ಗಾವಿ 14: ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಹಾಗೂ ವಿದ್ಯಾವಂತರಾಗಿರಿ, ಸಂಘಟಿತರಾಗಿರಿ ಮತ್ತು ಉತ್ತೇಜಿತರಾಗಬೇಕು ಎಂಬುದು ಡಾ. ಬಾಬಾ ಸಾಹೇಬ ಅಂಬೇಡ್ಕರ ಆಶಯವಾಗಿತ್ತು ಎಂದು ಪ್ರಾಚಾರ್ಯ ಎಸ್.ಹೆಚ್. ಹಾವೇರಿ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ರಾಮ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿಶ್ವದ ಜನರ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಜೀವನವು ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.
ಯಾವ ದೇಶದಲ್ಲಿ ಶಾಲೆಗಳಿಗಿಂತ ದೇವಾಲಯದ ಗಂಟೆ ಹೆಚ್ಚು ಬಾರಿಸುತ್ತದೆಯೋ ಆ ದೇಶದಲ್ಲಿ ಆಜ್ಞಾನ ಮತ್ತು ಬಡತನ ಇರುತ್ತದೆ. ಅದೇ ಯಾವ ದೇಶದಲ್ಲಿ ದೇವಾಲಯಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಬಾರಿಸುತ್ತದೆಯೋ ಆ ದೇಶದಲ್ಲಿ ಶ್ರೀಮಂತಿಕೆ ಹೆಚ್ಚು ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದರು ಎಂದರು.
ಈ ಸಂದರ್ಭದಲ್ಲಿ ಶೇಖರ ಪರಸಾಪೂರ, ಮಾರುತಿ ಲಮಾಣಿ, ಮಂಜುಳಾ ಪಾಟೀಲ, ಗಾಯತ್ರಿ ದೈವಜ್ಞ, ವಿದ್ಯಾ ಹೆಸರೂರ, ಶೃತಿ ನವರತ್ನ, ಕೆ.ಎಸ್.ಅಶ್ವಿನಿ, ಮಂಜುಳಾ.ಪಿ.ಬಿ, ಲಾವಣ್ಯ, ಸರೋಜಾ ಮಡ್ಲಿ, ಗೀತಾ ಪಟ್ಟಣಶೆಟ್ಟಿ, ಸಂಗೀತಾ ಹರಿಗೊಂಡ, ಉಮಾ, ಬಿಂದಿಯಾ, ರಂಜಿತಾ, ನೇತ್ರಾವತಿ, ಸೇರಿದಂತೆ ವೇಷಭೂಷಣ ಪಾತ್ರದಾರಿ ವಿದ್ಯಾರ್ಥಿಗಳಾದ ಸುನೀಲ ಹೊಸಮನಿ, ರಾಹುಲ್ ಅರೇರ, ಮಹ್ಮದ ಇರ್ಾನ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.