ಅತ್ಯುನ್ನತ ಸಂವಿಧಾನ ದೇಶಕ್ಕೆ ಡಾ.ಅಂಬೇಡ್ಕರರ ಕಾಣಿಕೆ: ಜಕ್ಕನಗೌಡರ
ಸವದತ್ತಿ 15: ಡಾ.ಬಿ.ಆರ್.ಅಂಬೇಡ್ಕರವರು ನಮ್ಮ ಭಾರತ ದೇಶಕ್ಕೆ ಅತ್ಯುನ್ನತವಾದಂತ ಸಂವಿಧಾನವನ್ನು ಕಾಣಿಕೆಯನ್ನಾಗಿ ನೀಡಿದ್ದು, ತಮ್ಮ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟ ಮಹಾನಾಯಕರು ಎಂದು ತಹಸೀಲ್ದಾರ ಜೆ.ಬಿ.ಜಕ್ಕನಗೌಡರ ಹೇಳಿದರು.
ಪಟ್ಟಣದ ತಾ.ಪಂ.ಸಭಾಭವನದಲ್ಲಿ ತಾಲೂಕಾ ಆಡಳಿತ ಹಾಗೂ ತಾಲೂಕು ಪಂಚಾಯತ, ಸಮಾಜಕಲ್ಯಾಣ ಮತ್ತು ಪುರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರವರ 132ನೇಯ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಇಂದು ನಮ್ಮೊಂದಿಗೆ ಅವರು ಇಲ್ಲದಿರಬಹುದು. ಆದರೆ ಅವರ ತತ್ವ ಆದರ್ಶಗಳು ಇಂದಿಗೂ ನಮ್ಮೆಲ್ಲರಿಗೂ ಮಾರ್ಗದರ್ಶನವನ್ನು ನೀಡುತ್ತಿವೆ ಎಂದರು.
ಕೆ.ಶಿವಾಪುರದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ನಿಲಯ ಪಾಲಕರಾದ ಎಸ್.ಎಸ್.ಮಾಳಗಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರರವರು ದೀನದಲಿತರ ಉದ್ದಾರಕ್ಕಾಗಿ ಜನಿಸಿದವರು. ಸಮಾಜದಲ್ಲಿ ಹಿಂದುಳಿದವರ ಶೈಕ್ಷಣಿಕ ಅಭಿವೃದ್ದಿಗೆ ಚಿಂತೆನೆ ಮಾಡಿ ಪ್ರತಿಯೊಬ್ಬರು ವಿದ್ಯಾವಂತರಾಗಿರಿ ಎಂದು ಸಮಾಜಕ್ಕೆ ಹೇಳಿದ ಧೀಮಂತ ವ್ಯಕ್ತಿ ಎಂದರು
ಜಿ.ಪಂ. ಕಾರ್ಯನಿರ್ವಾಹಕ ಅಭಿಯಂತರ ಎಚ್.ಸಿ.ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಪಿಐ ಕರುನೇಶಗೌಡ, ಆರ್.ಬಿ.ರಕ್ಕಸಗಿ, ಬಿಇಓ ಶ್ರೀಶೈಲ್ ಕರಿಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಅಭಿಯಂತರರಾದ ಎಚ್.ಏ.ಕದ್ರಾಪೂರ, ಚೈತ್ರೇಶ ದಾಸರ ಸೇರಿದಂತೆ ತಾಲೂಕಾಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಆರ್.ಕುಲಕಣರ್ಿ ಸ್ವಾಗತಿಸಿದರು. ನಿಲಯ ಪಾಲಕಿ ಆಶಾ ಕಾಂಬಳೆ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ದೇಸಾಯಿ ಕೋಟೆಯ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರವರ ಪ್ರತಿಮೆಗೆ ಚುನಾವಣಾಧಿಕಾರಿ ಡಾ.ರಾಜೀವ ಕೊಲೇರ ತಾಲೂಕಾ ಆಡಳಿತದವತಿಯಿಂದ ಪುಷ್ಟಾರ್ಪಣೆ ಮಾಡಿದರು .