ವಿದ್ಯಾರ್ಥಿಗಳಿಗೆ ಪರಿಸರಜಾಗೃತಿ ಮೂಡಿಸಿದ ನಿಲಯ ಮೇಲ್ವಿಚಾರಕ: ರಮೇಶ
ಲೋಕದರ್ಶನ ವರದಿ
ಶಿಗ್ಗಾವಿ 10: ತಾಲೂಕಿನ ಹೋತನಹಳ್ಳಿ ಡಿ. ದೇವರಾಜಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಆವರಣದಲ್ಲಿ ಗಿಡಗಳನ್ನು ಅಚ್ಚುವದರ ಮೂಲಕ "ವನಮಹೋತ್ಸವ" ವನ್ನುನಿಲಯ ಮೇಲ್ವಿಚಾರಕ ರಮೇಶ ಹರಿಜನನೇತೃತ್ವದಲ್ಲಿ ಆಚರಿಸಲಾಯಿತು.
ನಂತರ ಮಾತನಾಡಿದ ಅವರು ಗಿಡಗಳನ್ನು ಹೆಚ್ಚು ಹೆಚ್ಚು ನೆಡುವುದರಿಂದ ಮಾನವನ ಬದುಕಿಗೆ ಆಗುವಂತ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಹೀಗೆ ನಿಲಯದಆವರಣದಲ್ಲಿ ನೂರಾರು ಗಿಡಗಳನ್ನು ಅಚ್ಚುವುದರ ಮೂಲಕ ವಿದ್ಯಾರ್ಥಿಗಳಿಗೆ ಪರಿಸರಜಾಗೃತಿ ಮೂಡಿಸುತ್ತಿದ್ದಾರೆ ಹಾಗೂ ಇಲ್ಲಿ ನೆಡುವ ಗಿಡಗಳು ಬಹಳ ಉಪಯೋಗಕಾರಿಯಾಗಿರುವ ಔಷಧಿ ಗಿಡಮೂಲಿಕೆಗಳ ಗಿಡಗಳು ಇವುಗಳಿಗೆ ಬರುವ ದಿನಗಳಲ್ಲಿ ಬಹಳ ಬೇಡಿಕೆ ಬರುತ್ತದೆ ಮತ್ತು ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತ, ನೆರೆ ಹೊರೆಯಲ್ಲಿ ಸಾಧ್ಯವಾದರೆ ಒಂದು ಗಿಡ ನೆಟ್ಟು ಪಾಲನೆ ಪೋಷಣೆ ಮಾಡಿದರೆ ಅದು ಹೆಮ್ಮರವಾಗಿ ಬೆಳೆದು ಮುಂದೆ ಸರ್ವಜನಾಂಗಕ್ಕೂ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಸಹಕಾರಿಯಾಗುತ್ತದೆ ಹಾಗೂ ಅನೇಕ ರೋಗ ರುಜಿನಗಳಿಗೆ ಫಲಕಾರಿಯಾಗುತ್ತದೆ ಎಂದರು.
ನಿಲಯ ಮೇಲ್ವಿಚಾರಕ ರಮೇಶ ಹರಿಜನಅವರು ಮಕ್ಕಳಿಗೆ ಒಂದು ವೇದಿಕೆ ನಿರ್ಮಾಣ ಮಾಡಿಅಲ್ಲಿ ಪ್ರತಿಯೊಂದು ಮಕ್ಕಳಿಗೆ 2 ಸಸಿಗಳನ್ನು ನೀಡಿಅದು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಬೆಳೆದು ದೊಡ್ಡದಾದ ಗಿಡಗಳಿಗೆ ಬಹುಮಾನವನ್ನು ಘೋಷಣೆ ಮಾಡಿದ್ದಾರೆ ಅಲ್ಲದೇ ಸುಮಾರು 80 ಗಿಡಗಳು ಸದ್ಯ ವಸತಿ ನಿಲಯದಲ್ಲಿವೆ. ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು