ದೇಶದಲ್ಲಿ ಕತ್ತೆ ಹಾಲಿನ ಡೈರಿ ಶೀಘ್ರ ಕಾರ್ಯರಂಭ..!!
ನವದೆಹಲಿ, ಆಗಸ್ಟ್ 10: ದೇಶದಲ್ಲಿ ಹಸು, ಎಮ್ಮೆ ಮತ್ತು ಮೇಕೆಯನ್ನು ಹಾಲಿಗಾಗಿ ಸಾಕಲಾಗುತ್ತಿದೆ ಆದರೆ ಮೊದಲ ಬಾರಿ ಶೀಘ್ರದಲ್ಲೇ ಕತ್ತೆ ಹಾಲಿನ ಡೈರಿ ಕೂಡ ದೇಶದಲ್ಲಿ ಕಾರ್ಯರಂಭವಾಗಲಿದೆ.
ಈಕ್ವಿನ್ಗಳ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್ಆಸರ್ಿಇ) ಶೀಘ್ರದಲ್ಲೇ ಹರಿಯಾಣದ ಹಿಸಾರ್ನಲ್ಲಿ ಕತ್ತೆ ಹಾಲಿನ ಡೈರಿ ಪ್ರಾರಂಭಿಸಲಿದೆ. ಹಿಸಾರ್ನಲ್ಲಿರುವ ಈ ಕತ್ತೆಗಳು ಪ್ರಸ್ತುತ ಸಂತಾನೋತ್ಪತ್ತಿಗೆ ಒಳಗಾಗುತ್ತಿವೆ ಎಂದೂ ಹೇಳಲಾಗಿದೆ. ಕತ್ತೆಯ ಹಾಲು ಮನುಷ್ಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಅಂದ್ರೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹಲವು ಮಂದಿ ನಂಬಿದ್ದಾರೆ ಕೂಡ.
ಹಲಾರಿ ತಳಿಯ ಮಹತ್ವ: ಕತ್ತೆಯ ಈ ತಳಿ ಗುಜರಾತ್ನಲ್ಲಿ ಕಂಡುಬರುತ್ತದೆ ಮತ್ತು ಅದರ ಹಾಲನ್ನು ಔಷಧಿಗಳ ನಿಧಿ ಎಂದೇ ಹೇಳಲಾಗುತ್ತಿದೆ ಹಲಾರಿ ತಳಿಯ ಕತ್ತೆ ಕ್ಯಾನ್ಸರ್, ಬೊಜ್ಜು, ಅಲಜರ್ಿ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೊಂದಿದೆ.
ಸಣ್ಣ ಮಕ್ಕಳೀಗೆ ಹೆಚ್ಚಾಗಿ ಹಸು ಅಥವಾ ಎಮ್ಮೆ ಹಾಲಿನಿಂದ ಅಲಜರ್ಿಯಾಗಲಿದೆ ಆದರೆ ಕತ್ತೆಯ ಹಲಾರಿ ತಳಿಯ ಕತ್ತೆ ಹಾಲು ಮಕ್ಕಳಿಗೆ ಯಾವುದೇ ಅಲಜರ್ಿ ಉಂಟಾಗುವುದಿಲ್ಲ ಎನ್ನಲಾಗಿದೆ. ಕತ್ತೆ ಹಾಲಿ ಸದ್ಯ ಲೀಟರ್ ಗೆ 2000 ರೂ.ನಿಂದ 7000 ರೂಪಾಯಿವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.