ಕುಲಕರ್ಣಿ ಕುಟುಂಬದಿಂದ ರೂ. 1 ಲಕ್ಷ ದೇಣಿಗೆ
ಬೈಲಹೊಂಗಲ 10: ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಗೌರವ ಅಧ್ಯಕ್ಷ ಡಾ. ಚಿದಂಬರ ಕುಲಕಣರ್ಿ ಅವರ ಧರ್ಮಪತ್ನಿ ಡಾ. ರಾಜಶ್ರೀ ಕುಲಕಣರ್ಿ ಅವರು ತಮ್ಮ ಕುಟುಂಬದ ಪರವಾಗಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ರೂ. ಒಂದು ಲಕ್ಷ ದೇಣಿಗೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಂಪರ್ಕ ಪ್ರಮುಖರಾದ ಪ್ರಸಾದ ಕುಲಕಣರ್ಿ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲ್ಲೂಕು ಅಭಿಯಾನ ಸಂಯೋಜಕ ಯಲ್ಲಪ್ಪ ದೇವರಹುಬ್ಬಳ್ಳಿ ಮತ್ತು ಆರ್.ಎಸ್.ಎಸ್. ಪ್ರಮುಖ ಮುಕುಂದ ಕುಲಕಣರ್ಿ ಇದ್ದರು.