ಚಿಕ್ಕೋಡಿ

ಅತಿಯಾದ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ: ಸಿಪಿಐ ಮುಲ್ಲಾ ಎಚ್ಚರಿಕೆ

ಅತಿಯಾದ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ: ಸಿಪಿಐ ಮುಲ್ಲಾ ಎಚ್ಚರಿಕೆ

ಮಾಂಜರಿ 16: ಸಮೀಪದ ಬಾವನಸೌಂದತ್ತಿ ಗ್ರಾಮದಲ್ಲಿ ಗಣೇಶ ಉತ್ಸವ ಸಂಭ್ರಮದಿಂದ ಆಚರಣೆಮಾಡಿ, ಅತಿಯಾದ ಧ್ವನಿವರ್ಧಕ ಸೌಂಡಗಳನ್ನು ಬಳಸಬೇಡಿ. ಬಳಸಿದರೆ ಅಂತಹ ಮಂಡಳಗಳ ಮುಖಂಡರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಎಚ್ ಡಿ ಮುಲ್ಲಾ ಎಚ್ಚರಿಕೆ ನೀಡಿದರು.  

ಸಮೀಪದ ಭಾವನ ಸೌದತ್ತಿ ಗ್ರಾಮದಲ್ಲಿ ಇಂದು  ಗ್ರಾಮಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾದ  ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮತಾನಾಡಿದರು. ಗಣೇಶ ಉತ್ಸವು ಸಂಭ್ರಮದಿಂದ ಆಚರಣೆ ಮಾಡಿ. ಆದರೆ ಪೊಲೀಸ್ ಇಲಾಖೆ ನೀಡಿರುವ ನಿಯಮಗಳನ್ನು ಪಾಲಿಸಿ ಒಂದು ವೇಳೆ ಉಲ್ಲಂಘನೆಯಾದರೆ ಅದಕ್ಕೆ ಮಂಡಳಗಳ ಮುಂಖಂಡರುಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡುವುದರ ಜೊತೆಗೆ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮನವಿ ಮಾಡಿಕೊಂಡರು. ಪಿಎಸ್‌ಐ ಐಶ್ವರ್ಯ ನಾಗರಾಳ, ರೂಪಾಲಿ ಗುಡದಗಿ, ಆನಂದ್ ಬಿ, ಗ್ರಾಪಂ ಉಪಾಧ್ಯಕ್ಷ ಅಜಾದ್ ತಾಸೀವಾಲೆ, ಗ್ರಾಮ ಪಂಚಾಯತ್ ಸದಸ್ಯರಾದ, ಅಜೀತ ಖೆಮಲಾಪುರೆ, ಅನಿಲ ಹಂಜೆ ರಾವಸಾಹೇಬ ಖಾಂಡೇಕರ, ಸಂತೋಷ ಮಂಗಸೂಳೆ, ಶಾಂತಿನಾಥ ಪಾಟೀಲ, ಅರುಣ ಶಿಂಧೆ, ಅಣ್ಣಾಸಾಹೇಬ ಮಗದುಮ, ರಾಜು ಖಾಂಡೇಕರ ಪಿಡಿಓ ಎಸ್ ಎಸ್ ನ್ಯಾಮಗೌಡರ ಸೇರಿದಂತೆ ಅನೇಕ ಮಂಡ ಮುಖಂಡರು ಹಾಜರಿದ್ದರು. 


ಸುದ್ದಿ ಓದಿ