ಕುಷ್ಟಗಿ

ದೇವರನ್ನು ಹೂಡಕಬೇಡಿ ನಿಮ್ಮ ತಂದೆ ತಾಯಿಗಳೇ ನಿಜವಾದ ದೇವರು: ಗುರುರಾಜ ಚಲವಾದಿ

ದೇವರನ್ನು ಹೂಡಕಬೇಡಿ ನಿಮ್ಮ ತಂದೆ ತಾಯಿಗಳೇ ನಿಜವಾದ ದೇವರು: ಗುರುರಾಜ ಚಲವಾದಿ

ಕುಷ್ಟಗಿ 13: ದೇವರನ್ನು ಕಂಡಕಂಡಲ್ಲಿ ಹೂಡಕಬೇಡಿ ನಿಮ್ಮ ತಂದೆ ತಾಯಿಗಳೇ ನಿಜವಾದ ದೇವರು ಪ್ರತಿಯೊಬ್ಬರೂ ಅವರನ್ನು ಗೌರವದಿಂದ ಕಾಣಬೇಕು ಎಂದು ತಹಸೀಲ್ದಾರ್ ಗುರುರಾಜ ಚಲವಾದಿ ಹೇಳಿದರು.  

ತಾಲೂಕು ಆಡಳಿತ, ಹಡಪದ ಸಮಾಜ ಸಸಂಘದ  ಸಂಯುಕ್ತ ಆಶ್ರಯದಲ್ಲಿ ಬುಧುವಾರ ಮಧ್ಯಾಹ್ನ ಇಲ್ಲಿನ ಬುತ್ತಿ ಬಸವೇಶ್ವರ ಸ್ಥಾನದ ಸಮುದಾಯ ಭವನದಲ್ಲಿ ಏರಿ​‍್ಡಸಿದ್ದ ನಿಜ ಸುಖಿ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ಸಮಾಜದಲ್ಲಿ ಅನೇಕ ಕೊಡುಗೆ ನೀಡಿದ್ದಾರೆ.  

ಮಹಾತ್ಮರು, ಸ್ವಂತರು, ಶರಣರು ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಗುರುತಿಸುವುದರ ಜೊತೆಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೂಢನಂಬಿಕೆಗಳನ್ನು ಹೋಗಲಾಡಿಸುವ ಅತ್ಯಂತ ಮಹತ್ವದ ಕಾರ್ಯವನ್ನು ಬಸವಣ್ಣನವರು ಮಾಡಿದ್ದಾರೆ. ಸಾಧನೆ ಎಂದರೆ ತಪಸ್ಸು ಮಾಡುವುದಲ್ಲ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸರಕಾರದ ಅನೇಕ ಸೌಲಭ್ಯಗಳನ್ನು ಪಡೆದು ಮಹತ್ವದ ಸಾಧನೆಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಹಡಪದ ಸಮಾಜದ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.  

ಪ್ರಾಚಾರ್ಯ ಎಸ್‌. ವಿ ಡಾಣಿ ವಿಶೇಷ ಉಪನ್ಯಾಸ ನೀಡಿ ಕಾಯಕ, ಸಿದ್ಧಾಂತ, ಘನಪೂಜೆ, ಮಂದಿರ, ಅನುಭವ ಮಂಟಪದಲ್ಲಿ ಒಬ್ಬ ಶ್ರೇಷ್ಠ ಶರಣರಾದ  ಹಡಪದ ಅಪ್ಪಣ್ಣನವರು ಎಂದು ಬಣ್ಣಿಸಿದರು. ಎಲ್ಲ ಕಾಯಕಗಳು ಶ್ರೇಷ್ಠ ಮೇಲು-ಕೀಳು ಎಂಬ ಭೇದಭಾವ ಮಾಡದೆ ದುಡಿಯುವ ವರ್ಗಕ್ಕೆ ಪ್ರಾಶಸ್ತ್ಯ ನೀಡಿದ ಕೀರ್ತಿ ಶರಣ ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು. ಶಿಕ್ಷಕ ನಟರಾಜ ಸೋನಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸಂದರ್ಭದಲ್ಲಿ ಹಡಪದ ಸಮಾಜದ ಗೌರವ  ಅಧ್ಯಕ್ಷ ದೊಡ್ಡಪ್ಪ ಹೊಸೂರ, ಅಧ್ಯಕ್ಷ ಪುತ್ರ​‍್ಪ ಹಡಪದ, ಉಪಾಧ್ಯಕ್ಷ ರುದ್ರ​‍್ಪ ಹಡಪದ, ಚಳಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ್ ಹಡಪದ, ಬಸವ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ್ ನಿರ್ಮಿತಿ ಕೇಂದ್ರದ ಸಹಾಯಕ ಅಭಿಯಂತರ ಆದೇಶ, ಮಲ್ಲಪ್ಪ ಗಡಾದ, ವೀರಭದ್ರ​‍್ಪ ನಿಡುಗುಂದಿ, ಚಂದ್ರ​‍್ಪ ಗುಮಗೇರಿ, ಶಿವಪ್ಪ ಇಟಂಗಿ ಮತ್ತು ಹಡಪದ ಸಮಾಜದ ಯುವಕರು, ಗುರು ಹಿರಿಯರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಮಹಾಂತೇಶ ಹಡಪದ ನಿರೂಪಿಸಿದರು. ಶರಣಪ್ಪ ಆಡೂರ ವಂದಿಸಿದರು. ಗಮನಸೆಳೆದ ಮೆರವಣಿಗೆ:  ತಹಸೀಲ್ದಾರ್ ಕಚೇರಿಯಲ್ಲಿ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆಗೆ  ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ಅವರು ಚಾಲನೆ ನೀಡಿದರು.  

ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶ್ರೀಬುತ್ತಿಬಸವೇಶ್ವರ ದೇವಸ್ಥಾನದ ವರೆಗೆ ನಡೆದ ಮೆರವಣಿಗೆಗೆ ಕುಂಭ ಹೊತ್ತ ಮಹಿಳೆಯರು ಹಾಗೂ ಬ್ಯಾಂಡ್ ಬಾಜಿ, ಬ್ಯಾಂಜೋ  ಕಲಾವಿದರು ನೃತ್ಯ, ವಾದನ ಸಾರ್ವಜನಿಕರ ಗಮನಸೆಳೆಯಿತು. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು  ಹಾಗೂ ಹಡಪದ ಸಮುದಾಯದ ಪ್ರಮುಖರು ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ