ದೊಡ್ಡಬಸನಗೌಡ ಬಯ್ಯಾಪುರ ಹುಟ್ಟು ಹಬ್ಬ ಅದ್ದೂರಿ ಆಚರಣೆ
ಕುಷ್ಟಗಿ 07: ಕಾಂಗ್ರೆಸ್ ಪಕ್ಷದ ಯುವ ಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪುರ ಇವರ ಹುಟ್ಟು ಹಬ್ಬದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಕುಷ್ಟಗಿಯ ಅಭಿಮಾನಿ ಬಳಗದಿಂದ ಇಲ್ಲಿನ ಪಕ್ಕಿರ್ಪ ಹೊಸವಕ್ಕಲ್ ಅವರ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿದರು.
ಬೆಳಿಗ್ಗೆ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೋರ ರೋಗಿಗಳಿಗೆ ಹಾಲು,ಹಣ್ಣು, ಬ್ರೆಡ್ ವಿತರಿಸಿದರು. ನಂತರ ಪಟ್ಟಣದ ಇಂದಿರಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ನೆಟ್ಟರು.
ಸಂಜೆ 6 ಘಂಟೆಗೆ ಪಟ್ಟಣದ ಪಕ್ಕಿರ್ಪ ಹೊಸವಕ್ಕಲ್ ಅವರ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪುರ ಅವರು ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಉಮೇಶ ಮಂಗಳೂರು, ಮಂಜುನಾಥ ಕಟ್ಟಿಮನಿ, ಶೌಕತ್ ಅಲಿ ಕಾಯಿಗೆಡ್ಡಿ, ಮಹೇಶ ಕೋಳೂರ, ಮಾದ್ಯಮ ವಕ್ತಾರ ಲಾಡ್ಲೇಮಸಾಕ್ ಯಲಬುರ್ಗಿ,
ಮಾಲತಿ ನಾಯ್ಕ್, ಕೃಷ್ಣಮೂರ್ತಿ ಟೆಂಗುಂಟಿ, ಬಾಳಪ್ಪ ಬೇವಿನಕಟ್ಟಿ, ವೀರಗಂಗಾಧರ ಹಿರೇಮಠ, ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಶಿವರಾಜ ಕಟ್ಟಿಮನಿ, ಪುರಸಭೆ ಸದಸ್ಯರಾದ ಸೈಯದ್ ಮೈನುದ್ದೀನ್ ಮುಲ್ಲಾ, ರಾಮಣ್ಣ ಬಿನ್ನಾಳ, ವಿರೇಶಗೌಡ ಪೊಲೀಸ್ ಪಾಟೀಲ್, ಸದ್ದಾಂ ಅಮರಾವತಿ, ಪ್ರವೀಣ ತಳ್ಳಿ, ಪ್ರುಭುಗೌಡ ಪೊಲೀಸ್ ಪಾಟೀಲ್, ಮಂಜು ಟೆಂಗುಂಟಿ, ಗುತ್ತಿಗೆದಾರ ಪ್ರಭುಗೌಡ ಪಾಟೀಲ್,
ಕಾಂಗ್ರೆಸ್ ಪಕ್ಷದ ಸೇವಾದಳ ಘಟಕದ ಉಪಾಧ್ಯಕ್ಷ ವೆಂಕಟೇಶ ಇಂಗಳಗಿ ಸೇರಿದಂತೆ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.
ಕುಷ್ಟಗಿ ತಾಲೂಕಿನ ಸಾವಿರಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಯುವ ಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಬೃಹತ್ ಗಾತ್ರದ ಹೂವು ಮಾಲೆಗಳ ಸುರಿಮಳೆ ಸುರಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.