ಬಳ್ಳಾರಿ

ಆಮ್ ಆದ್ಮಿ ಪಕ್ಷದಿಂದ ದೊಡ್ಡ ಕೇಶವ ರೆಡ್ಡಿ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಕ್ಷದಿಂದ ದೊಡ್ಡ ಕೇಶವ ರೆಡ್ಡಿ  ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ 

ಬಳ್ಳಾರಿ 19: ಆಮ್ ಆದ್ಮಿ ಪಕ್ಷದವತಿಯಿಂದ ನಗರ  ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೊರ್ಲಗುಂದಿ ದೊಡ್ಡ ಕೇಶವ ರೆಡ್ಡಿ ತಮ್ಮ ಅಪಾರ ಬೆಂಬಲಿಗರೊಂದಿಗೆ  ಮಹಾನಗರ ಪಾಲಿಕೆ ಕಛೇರಿಗೆ ಬಂದು ಚುನಾವಣಾಧಿಕಾರಿ ರುದ್ರೇಶ್ ರವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.  

   ಇದಕ್ಕು ಮುನ್ನ ಮುಂಜಾನೆ ಬಳ್ಳಾರಿ ನಗರದ ಆರಾಧ್ಯ ದೇವತೆ ಶ್ರೀ ಕನಕ ದುರ್ಗಮ್ಮ ದೇವಿಗೆ ವಿಶೇಷವಾದ ಪೂಜೆ ಕಾರ್ಯಕ್ರಮಗಳನ್ನು ನಡೆಸಿ ಅಪಾರ ಬೆಂಬಲಿಗರು ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ವಿ ಬಿ  ಮಲ್ಲಪ್ಪ ಜಿಲ್ಲಾಧ್ಯಕ್ಷ ಪಿ ಕಿರಣ್ ಕುಮಾರ್ ಪಕ್ಷದ ಮುಖಂಡ  ಜೆ.ವಿ ಮಂಜುನಾಥ, ಖಲಂದರ್ ಭಾಷ ಪ್ರದೀಪ್ ರೆಡ್ಡಿ, ವಕೀಲ ಶಿವಲಿಂಗನಾಯಕ ಸೇರಿದಂತೆ ಅನೇಕ ಬೆಂಬಲಿಗರೊಂದಿಗೆ ಪಾಲಿಕೆ ಕಛೇರಿಗೆ ಬೃಹತ್ ಮೆರವಣಿಗೆಯಲ್ಲಿ  ಪಕ್ಷದ ಕಾರ್ಯಕರ್ತರು, ಸದಸ್ಯರು ಆಗಮಿಸಿ ನಾಮ ಪತ್ರವನ್ನು ಸಲ್ಲಿಸಿದರು. 


ಸುದ್ದಿ ಓದಿ