ಪ್ರತಿಯೊಬ್ಬರು ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಿ: ದೊಡ್ಡಗೌಡರ
ಬೈಲಹೊಂಗಲ 18: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಾಮಭಕ್ತರು ಧನಸಂಗ್ರಹಿಸಲಾಗುತ್ತಿದ್ದು, ಪ್ರತಿಯೊಬ್ಬರು ಕೈಲಾದ ಮಟ್ಟಿಗೆ ಹಣ ನೀಡಿ ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ತಾಲೂಕಿನ ಮುರಕೀಭಾವಿ ಗ್ರಾಮದ ಸಿದ್ದಾರೂಡ ಮಠದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸುತ್ತಿರುವ ಧನ ಸಹಾಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ರಾಮನ ಮಂದಿರ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಅದು ಬೇಗ ಎಲ್ಲರ ದರ್ಶನಕ್ಕೆ ಲಭ್ಯವಾಗಲು ನಾಗರಿಕರು ತನುಮನ ಧನದ ಸಹಾಯ ಮಾಡಬೇಕೆಂದರು.
ಆರ್ಎಸ್ಎಸ್ ಜಿಲ್ಲಾ ಸಂಚಾಲಕ ಹೃಷಿಕೇಶ, ಎಪಿಎಂಸಿ ಸದಸ್ಯ ಬಿ.ಎಫ್.ಕೊಳದೂರ,ಶಿವಲಿಂಗಪ್ಪ ಶಿಬಸನ್ನವರ,ಈರನಗೌಡ ಪಾಟೀಲ,ರಾಯನಾಯ್ಕರ ನಾಯ್ಕರ, ಗ್ರಾ.ಪಂ ಸದಸ್ಯರಾದ ಶಿವಾನಂದ ಪಾಟೀಲ, ಅಡಿವೆಪ್ಪ ಮೋದಗಿ, ರಾಜು ಒಡೆಯರ್,ಮಂಜು ಉಡಕೇರಿ,ಬಾಳೇಶ ಪೂಜೆರಿ,ರಾಘು ಹಂಪನ್ನವರ, ನೀಲಕಂಠ ಉಳವಿ, ಚಂದ್ರಯ್ಯ ಸುಂಕದ,ಗ್ರಾಮಸ್ಥರು ಪಾಲ್ಗೊಂಡಿದ್ದರು.