ಲಂಚ ಸ್ವೀಕರಿಸುತ್ತಿದ್ದ ವೈದ್ಯ ಎಸಿಬಿ ಬಲೆಗೆ
ಬೈಲಹೊಂಗಲ 4: ಹೆರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೋರ್ವಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ವಿಳಂಬ ಮಾಡುತ್ತಾ, ಲಂಚಕ್ಕೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದ ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ. ವಿರೇಂದ್ರ ಡಿ. ಕುಚಬಾಳ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಯಲ್ಲಪ್ಪಾ ಕೋಳಕಾರ ತಮ್ಮ ಪತ್ನಿ ಶ್ರೀಮತಿ. ಯಶೋಧಾ ಯಲ್ಲಪ್ಪಾ ಕೋಳಕಾರ, ಅವರನ್ನು ಹೆರಿಗೆ ಸಲುವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಾ.30 ರಂದು ಒಳರೋಗಿಯಾಗಿ ದಾಖಲಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಗೆ ಒಳಗಾಗಿ ಹೆರಿಗೆ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು. ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಡಾ. ವಿರೇಂದ್ರ ಡಿ. ಕುಚಬಾಳ ರೂ.7000ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ವಿಳಂಬವಾಗುತ್ತಿದ್ದ ಕಾರಣಕ್ಕಾಗಿ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರಲಿಲ್ಲ. ವೈದ್ಯರ ವರ್ತನೆಯಿಂದ ಬೇಸತ್ತು ಮಹಿಳೆಯ ಪತಿ ಯಲ್ಲಪ್ಪ ಕೋಳಕಾರ ಎಸಿಬಿಗೆ ದೂರು ನೀಡಿದ್ದರು.
ದೂರಿನನ್ವಯ ಬೆಳಗಾವಿ ಉತ್ತರ ವಲಯ ಭ್ರμÁ್ಟಚಾರ ನಿಗ್ರಹದಳ ಪೆÇಲೀಸ್ ಅಧೀಕ್ಷಕ ಬಿ. ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಬೆಳಗಾವಿ ಪೆÇಲೀಸ್ ಉಪಾಧೀಕ್ಷ. ಜೆ.ಎಮ್.ಕರುಣಾಕರ ಶೆಟ್ಟಿ, ಪೆÇಲೀಸ್ ಇನ್ಸ್ಪೆಕ್ಟರಾದ ಹೆಚ್.ಸುನೀಲ್ಕುಮಾರ, ಎ.ಎಸ್ಗೂದಿಗೊಪ್ಪ ಮತ್ತು ಸಿಬ್ಬಂದಿ ಶನಿವಾರ ವೈದ್ಯ ಕುಚಬಾಳ ತಮ್ಮ ಆಸ್ಪತ್ರೆ ಕೊಠಡಿಯಲ್ಲಿ ಲಂಚದ ಹಣವನ್ನು ಸ್ವೀಕರಿಸುತ್ತಿರುವ ವೇಳೆಯಲ್ಲಿ ಬಲೆಗೆ ಬಿದಿದ್ದಾರೆ.
ಲಂಚದ ಹಣದ ಸಮೇತ ಆರೋಪಿತರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪ್ರಕರಣದ ತನಿಖೆಯನ್ನು ಮುಂದುವರೆಸಿರುತ್ತಾರೆ.