ಶಿಗ್ಗಾವ್

ಅತೀವೃಷ್ಟಿಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ದಿವಾಣಿ ನ್ಯಾಯಾಧೀಶೆ

ಅತೀವೃಷ್ಟಿಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ದಿವಾಣಿ ನ್ಯಾಯಾಧೀಶೆ

ಶಿಗ್ಗಾವಿ 08:  ಅತೀವೃಷ್ಟಿಯಿಂದ ಹಾನಿಗೊಳಗಾದ ಪಟ್ಟಣದ ಕೆಲ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸ್ಥಳೀಯ ದಿವಾಣಿ ನ್ಯಾಯಾಧೀಶೆರು, ತಾಲೂಕ ಕಾನೂನು ಸೇವಾ ಸಮಿತಿ ಸದಸ್ಯ, ಕಾರ್ಯದರ್ಶಿ ಅಶ್ವಿನಿ ಚಂದ್ರಕಾಂತ, ನೆರೆ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಕ್ಕೆ ಕ್ರಮಕೈಗೊಂಡು ಗಂಜಿಕೇಂದ್ರ ತೆರಯಲು ತಹಶೀಲ್ದಾರ ಸಂತೋಷ ಹಿರೇಮಠ ಅವರಿಗೆ ಸೂಚಿಸಿದರು. 

ವಡ್ಡರ ಓಣಿಯಲ್ಲಿ ಮಳೆಗೆ ಮನೆ ಹಾನಿಗೊಳಗಾದ ಸಿದ್ದವ್ವ ಗುಳೇದ, ಶಾಂತವ್ವ ಗುಳೇದ, ತಿಪ್ಪವ್ವ ಶಿವಳ್ಳಿ ಅವರ ಮನೆಗಳಿಗೆ ಭೇಟಿ ನೀಡಿದ ನ್ಯಾಯಾಧೀಶೆರು, ಕುಟುಂಬಗಳಿಗೆ ಧೈರ್ಯ ಹೇಳಿದರು. ಬಳಿಕ ರಾಜೀವ ನಗರದ ಮುಕ್ತಾಂಬಿ ತಾಳಿಕೋಟಿ ಅವರ ಮನೆಗೆ ಭೇಟಿ ನೀಡಿ ಅತಿಯಾದ ಮಳೆಯಿಂದ ಸಮಸ್ಯೆಯಲ್ಲಿರುವ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು.  ಮಳೆಯಿಂದ ಅಪಾಯ ಉಂಟಾಗುವ ಮೊದಲೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜೀವದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ತಹಸೀಲ್ದಾರರಿಗೆ ಸಲಹೆ ನೀಡಿದರು. 

ಈಗಾಗಲೇ ತಾಲೂಕಿನಲ್ಲಿ ಸುಮಾರು 480 ಮನೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಈ ಕುರಿತು ಅರ್ಜಿಗಳು ಬಂದಿವೆ. ಅದರಲ್ಲಿ ದಾಖಲಾತಿಗಳನ್ನು ಪರೀಶೀಲಿಸಿ 47 ಮನೆ ಹಾನಿಗೆ ಸೂಕ್ತವಾದ ಪರಿಹಾರ ನೀಡಲು ಸರಕಾ ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ತಾಲೂಕಿನಲ್ಲಿ ಸೂಕ್ತ ವಸತಿಗಾಗಿ ಸಮುದಾಯ ಭವನಗಳನ್ನು ತೆರೆಯಲಾಗಿದೆ. ಗ್ರಾಮಗಳ ಸರಕಾರಿ ಶಾಲೆಗಳಲ್ಲಿ ಗಂಜಿಕೆಂದ್ರಗಳನ್ನು ತೆರೆಯಲಾಗಿದೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ನ್ಯಾಯಾಧೀಶೆರಿಗೆ ವಿವರಿಸಿದರು. 

ಈ ಸಂದರ್ಭದಲ್ಲಿ ತಹಸೀಲ್ದಾರ್ ಕಛೇರಿ, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ