ರಾಣೆಬೆನ್ನೂರ

ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ: ಮಹಿಳಾ ದಿನಾಚರಣೆ

ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ: ಮಹಿಳಾ ದಿನಾಚರಣೆ


ಲೋಕದರ್ಶನ ವರದಿ 

ರಾಣೀಬೆನ್ನೂರ 20:  ಇಲ್ಲಿನ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಇತ್ತೀಚಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ನಡೆಯಿತು.  

  ಹಾವೇರಿ ಜಿಲ್ಲಾ ಮಹಿಳಾ ಪತಂಜಲಿ ಪ್ರಭಾರಿ ವಜ್ರೇಶ್ವರಿ ಲದ್ವಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಧನೆ ಮೆರೆದ ಮಹಿಳೆಯರಿಗೆ ಬಹುಮಾನ ವಿತರಿಸಿ ಗೌರವಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಜಂಬಗಿ ಅವರು ಸಮಾರಂಭದ ಅಧ್ಯಕ್ಷತೆ  ವಹಿಸಿದ್ದರು.  ಸ್ಥಳೀಯ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಮಾಲತೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಸರೋಜಾ ಹೂಲಿಹಳ್ಳಿ, ಬಿವಾಯ್‌ಎಸ್‌ಟಿ ಅಧ್ಯಕ್ಷ ಆರ್‌.ಎನ್‌.ರಾಠೋಡ, ಶಿವಾನಂದ ಬಡೆಂಕಲ್ ಲಲಿತಾ ಮೇಲಗಿರಿ,  ಕವಿತಾ ಕುಬುಸದ, ಪಾರ್ವತಿ ಹೂಲಿಹಳ್ಳಿ, ರೇಖಾ ರಾಮಾಳದ, ಸರೋಜಾ ಸುಣಗಾರ ಸೇರಿದಂತೆ ಸಮಿತಿ ಅನೇಕ ಗಣ್ಯರು, ಪತಂಜಲಿ ಪರಿವಾರದವರು ಉಪಸ್ಥಿತರಿದ್ದರು. 


ಸುದ್ದಿ ಓದಿ