ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ-ಕ್ಯಾಲೆಂಡರ್ ಬಿಡುಗಡೆ
ರಾಣೇಬೆನ್ನೂರ 13: ನಗರದ ಹೊರ ವಲಯ ಶಕ್ತಿಧಾಮ ಟೌನ್ಶಿಪ್ ಶಿಕ್ಷಕರ ಬಡಾವಣೆ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕವು ಶಿಕ್ಷಣ ಸಾಧಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ, ಸಾಧಕ ಶಿಕ್ಷಕರ ಸನ್ಮಾನ ಸಮಾರಂಭವು ಆಯೋಜಿಸಿತ್ತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು 20022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಶಾಸಕ ಅರುಣಕುಮಾರ ಪೂಜಾರ, ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ್ರ ಪಾಟೀಲ, ಜಿಲ್ಲಾಧ್ಯಕ್ಷ ವಿಜಯೇಂದ್ರ ಯತ್ನಳ್ಳಿ, ಜಿಲ್ಲಾ ಕಾರ್ಯದರ್ಶಿ ರವಿ ಗೋಣೆಪ್ಪನವರ, ಶಶಿಕುಮಾರ ಮೆಹರವಾಡೆ, ಎಂ.ಬಿ.ಬೈರಮ್ಮನವರ, ಶರಣಬಸನಗೌಡ ಪಾಟೀಲ, ಅಶೋಕ ಹಾಡೂರ, ಪಿ.ಟಿ.ಕಾಮನಹಳ್ಳಿ, ಬಿ.ಪಿ.ಶಿಡೇನೂರ, ಜಿ.ಬಿ.ಬೂದಿಹಾಳ, ಬಿ.ಅನುರಾಧ, ಸಿ.ಎನ್.ಕಲಕೋಟಿ. ಇ.ಸಿ.ಅಗಸಿಬಾಗಿಲು, ಅಶೋಕ ಹಾಡೂರ, ಅನ್ನಪೂರ್ಣ ಕಟಗಿ, ಎಸ್.ಆರ್.ಅಯ್ಯಣ್ಣನವರ, ಎನ್.ಕೆ.ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.