ಜಿಲ್ಲಾ ಪತಂಜಲಿ ಯೋಗ ಸಮಿತಿ ಬಲಿದಾನ ದಿವಸ
ಲೋಕದರ್ಶನ ವರದಿ
ರಾಣೀಬೆನ್ನೂರು 26: ಬಾಬಾರಾಮದೇವಜಿ ಅವರ ಕನಸಿನಂತೆ ಆರೋಗ್ಯ ಭಾರತ ನಿರ್ಮಾಣಕ್ಕಾಗಿ ಪತಂಜಿಲಿ ಪರಿವಾರದವರು ಜಿಲ್ಲೆಯೂ ಸೇರಿದಂತೆ ನಾಡಿನಾದ್ಯಂತ ಯೋಗ-ಧ್ಯಾನ-ಪ್ರಾಣಾಯಾಮದ ಮೂಲಕ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಯೋಗ ಗುರುಗಳು ಸೇವಾ ನಿರತರಾಗಿದ್ದಾರೆ ಎಂದು ಜಿಲ್ಲಾ ಪತಂಜಿಲಿ ಯೋಗ ಸಮಿತಯ ಅಧ್ಯಕ್ಷ ರವೀಂದ್ರ ಬಿಜಾಪುರ ಹೇಳಿದರು.
ಅವರು ಇಲ್ಲಿನ ಆದಿಶಕ್ತಿ ದೇವಸ್ಥಾನದ ಧ್ಯಾನ ಮಂದಿರದಲ್ಲಿ ಜಿಲ್ಲಾ ಸಮಿತಿ ಮತ್ತು ಭಾರತ್ ಸ್ವಾಭಿಮಾನ ಟ್ರಸ್ಟ್ ಆಯೋಜಿಸಿದ್ದ ಹುತಾತ್ಮ ಭಗತ್‌ಸಿಂಗ್, ಸುಖದೇವ್ ಅವರ ಬಲಿದಾನ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಕ್ಕೆ ಅಂದು ಆಗಮಿಸಿದ್ದ ರಾಮ್ ದೇವಜಿ ಅವರ ಯೋಗ ಕಾರ್ಯಕ್ರಮದ ಮೂಲಕ ಜಿಲ್ಲಾದ್ಯಂತ ಯೋಗ ಸಾಧಕರು ಮತ್ತಷ್ಟು ಸಾಧನೆ ಮಾಡುವುದರ ಮೂಲಕ ಯೋಗ ಮಯವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾರೆ. ಕನಿಷ್ಠ ಅರ್ಧ ತಾಸು ನಿತ್ಯವೂ ಯೋಗ ಧ್ಯಾನದಲ್ಲಿ ಸ್ತ್ರೀ-ಪುರುಷರು ಪಾಲ್ಗೊಳ್ಳುವುದರ ಮೂಲಕ ಋಷಿಮುನಿಗಳ ಆರೋಗ್ಯ ಜೀವನ ಪರಂಪರೆಯಂತೆ ಎಲ್ಲರೂ ಸುದೀರ್ಘ ಜೀವನ ಸಾಗಿಸಲು ಮುಂದಾಗಬೇಕು ಎಂದರು.
ಬಿಎಸ್‌ಟಿ ಅದ್ಯಕ್ಷ ಆರ್.ಎನ್.ರಾಠೋಡ ಅವರು ಭವಿಷ್ಯದ ಯುವ ಜನಾಂಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಈ ದೇಶದ ಸಂರಕ್ಷಣೆಗಾಗಿ ತಮ್ಮ ತ್ಯಾಗದ ಮೂಲಕ ಬಲಿದಾನ ಗೈದ ಮಹಾನ್ ಸಾಧಕರ ಕುರಿತು ಮಾಹಿತಿ ಮಾರ್ಗದರ್ಶನ ನೀಡಬೇಕಾದ ಇಂದಿನ ಅಗತ್ಯವಿದೆ ಎಂದರು. ನಿವೃತ್ತ ಶಿಕ್ಷಕ ಮಹೇಶಪ್ಪ ಬಣಕಾರ ಅವರು ಬಲಿದಾನ ದಿವಸ ಕುರಿತು ಉಪನ್ಯಾಸ ನೀಡಿದರು. ಹಲಗೇರಿ ಪಿಎಸ್‌ಐ ಕೆ.ಸಿ.ಕೋಮಲಾಚಾರ್ ಅವರು ಭಾರತದ ಸ್ವಾತಂತ್ರ್ಯ ಮತ್ತು ಬಲಿದಾನ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಾ ಪ್ರಭಾರಿ ಶಿವಾನಂದ ಬಡೇಂಕಲ್, ವರಿಷ್ಠ ಪ್ರಭಾರಿ ವಜ್ರೇಶ್ವರಿ ಲದ್ವಾ, ಯೋಗ ಸಾಧಕರಾದ ಗೀರೀಶ ಬಿರಾಳ, ರೇಖಾ ರಾಮಾಳದ, ಕವಿತಾ ಕುಬಸದ, ಪಾರ್ವತಿ ಹೂಲೀಹಳ್ಳಿ, ಹೇಮಾ ತಾಳೂರ, ಕವಿತಾ ಚಿನ್ನಿಕಟ್ಟಿ, ಗಂಗಾಧರ ರಾಮಾಳದ, ಕೃಷ್ನ ರಾಂಪುರ, ಪ್ರಕಾಶ ಮಾಗೋಡಮತ್ತಿತರರು ಉಪಸ್ಥಿತರಿದ್ದರು. ವಿಶಾಲ ನಾಗಪ್ಪ ಲಮಾಣಿ, ತೇಜಸ್‌ಕುಮಾರ ಕೆ.ಕೆ. ಇವರು ಬಲಿದಾನಗೈದ ಸಾಧಕರ ವೇಷ ಭೂಷಣದಲ್ಲಿ ಪಾಲ್ಗೊಂಡು ಗಮನ ಸೆಳೆದರು.