ರಾಣೆಬೆನ್ನೂರ

ಜಿಲ್ಲಾ ಮಟ್ಟದ ಯುವಜನೋತ್ಸವ; ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟದ ಯುವಜನೋತ್ಸವ; ವಿದ್ಯಾರ್ಥಿಗಳ ಸಾಧನೆ

ರಾಣೇಬೆನ್ನೂರು 21: ನಗರದ ಬಿಎಜೆಎಸ್‌ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಾವೇರಿ ಜಿಲ್ಲಾಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡ ವಿಶ್ವರೂಪ ಲಲಿತ ಕಲಾ ನಿಕೇತನದ ವಿದ್ಯಾರ್ಥಿಗಳಾದ ವಿಜಯ ಜಿ. ಕುಲಕರ್ಣಿ (ಕೊಳಲು) ಪ್ರಥಮ ಸ್ಥಾನ ಹಾಗೂ ವೆಂಕಟೇಶ್ ಜಿ.ಶಿರಹಟ್ಟಿ ಇವರು (ತಬಲಾ) ವಾದನದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ  ವಿಶ್ವವಿಭುಧ್ಯಾನ ಪೀಠದ ಗುರೂಜೀ  ಮೌನೇಶ್ವರ ಆಚಾರ್ಯ ಅವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ