ಚಿಕ್ಕೋಡಿ

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರವಾಹ ಪರಿಸ್ಥಿತಿ ವೀಕ್ಷಣೆ

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರವಾಹ ಪರಿಸ್ಥಿತಿ ವೀಕ್ಷಣೆ

ಮಾಂಜರಿ, 20 ; ಬೆಳಗಾವಿಯ ಜಿಲ್ಲಾಧಿಕಾರಿಗಳಾದ  ಮೊಹಮ್ಮದ್ ರೋಷನ್‌. ಹಾಗೂ ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಹುಲ್ ಶಿಂಧೆ ಅವರು ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ತೀರದ ಮಾಂಜರಿ ಅಂಕಲಿ, ಯಡೂರು ಗ್ರಾಮಗಳಿಗೆ  ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಸುಭಾಷ್ ಸಂಪಗಾಂವಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎನ್ ವಣ್ಣೂರ ತಹಸೀಲ್ದಾರಾದ ರಾಜಶೇಖರ ಬುರ್ಲಿ  ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ, ಉಪ ತಹಸೀಲ್ದಾರರು  ಗ್ರಾ ಪಂ ಪಿಡಿಒಗಳು ಗ್ರಾಮ ಆಡಳಿತಾಧಿಕಾರಿ ಉಪಸ್ಥಿತರಿದ್ದರು. 

ಈ ವೇಳೆ ಬೆಳಗಾವಿ ಜಿಲ್ಲಾಧಿಕಾರಿ ಪ್ರವಾಹ ಪರಿಸ್ಥಿತಿ ಅವಲೋಕಿಸಿ ನಂತರ  ಸುದ್ದಿಗಾರರ ಜೊತೆ ಮಾತನಾಡುವಾಗ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ವಿವಿಧ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿ ಹಾಗೂ ಕೃಷ್ಣೆಯ ಉಪನದಿಗಳಾದ ದೂದಗಂಗಾ ವೇದಗಂಗಾ ಮತ್ತು ಪಂಚಗಂಗಾ ನದಿ ಉಕ್ಕಿ  ಹರಿಯುತ್ತಿದ್ದು ಸದ್ಯ ಕೃಷ್ಣಾ ನದಿಯಲ್ಲಿ ಸುಮಾರು ಒಂದು ಲಕ್ಷ 50,ಸಾವಿರ ಕುಸೆಕ್ಸ್‌ ನೀರು ಹರಿದು ಬರುತ್ತಿದೆ ಆದ್ದರಿಂದ ಪ್ರವಾಹ ಪರಿಸ್ಥಿತಿ ಎದುರಿಸಲು ಬೆಳಗಾವಿ ಜಿಲ್ಲಾ ಆಡಳಿತ ಎಲ್ಲ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಅದೇ ಪ್ರಕಾರ ಪ್ರವಾಹ  ಪ್ರಸ್ಥಿತಿ ಎದುರು ಬಾರದೆಂದು ಸದ್ಯಕ್ಕೆ ಆಲಮಟ್ಟಿ ಜಲಾಶಯದಿಂದ ಸುಮಾರು ಎರಡೂವರೆ ಲಕ್ಷ ಕೂಸೆಕೆ ನೀರನ್ನು ಹರಿದು ಬಿಡಲಾಗಿದೆ ಎಂದು ಅವರು ತಿಳಿಸಿದರು. 

 ಬೆಳಗಾವಿ ಜಿಲ್ಲೆಯ ಗೋಕಾಕ್ ಹಾಗೂ ನಿಪ್ಪಾಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಅಲ್ಲಿನ ಜನರಿಗೆ ಸುರಕ್ಷಿತ ಸ್ಥಳಕಕ್ಕೆ ಸ್ಥಳಾಂತರಸಿ ಅವರನ್ನು  ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ ಗಂಜಿ ಕೇಂದ್ರದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಅದೇ ಪ್ರಕಾರ ಮುಂದಿನ ದಿನಮಾನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರೆ ಪ್ರವಾಹ ಪರಿಸ್ಥಿತಿ ಹತೋಟಿಕೆ ಬರಲು ಜಿಲ್ಲಾಡಳಿತ ಬೆಳಗಾವಿ ಬಿಜಾಪುರ್ ಬಾಗಲಕೋಟ ರಾಯಚೂರ್ ಮತ್ತು ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ್ ಸಾಂಗ್ಲಿ ಮತ್ತು ಸಾತಾರಾ ಜಿಲ್ಲಾಡಳಿಗಳಿಗೆ ಸತತ ಸಂಪರ್ಕವಿಟ್ಟು ಸಮನ್ವಯ ಸಾಧಿಸಲಾಗಿದೆ ಎಂದು ಅವರು ಹೇಳಿದರು. 


ಸುದ್ದಿ ಓದಿ