ಸೌಂದತ್ತಿ

ಮಹಿಳಾ ಭಕ್ತರಿಗೆ ಅರಿಸಿನ, ಕುಂಕುಮ, ಬಳೆ ವಿತರಣೆ

ಮಹಿಳಾ ಭಕ್ತರಿಗೆ ಅರಿಸಿನ, ಕುಂಕುಮ, ಬಳೆ ವಿತರಣೆ

ಉಗರಗೋಳ: ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಯಲ್ಲಮ್ಮನ ಸನ್ನಿಧಿಗೆ ಬರುವ ಮಹಿಳಾ ಭಕ್ತರಿಗೆ ರಾಜ್ಯ ಸರ್ಕಾರದ ಆದೇಶದಂತೆ ಅರಿಸಿನ, ಕುಂಕುಮ, ಬಳೆ ವಿತರಿಸಲಾಗುತ್ತಿದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಯಲ್ಲಮ್ಮನಗುಡ್ಡದಲ್ಲಿ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಸಿನ, ಕುಂಕುಮ, ಹಸಿರುಬಳೆ ವಿತರಿಸಿ ಅವರು ಮಾತನಾಡಿದರು.

ಯಲ್ಲಮ್ಮ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗಾಗಿ ನನ್ನ ಅಧಿಕಾರವಧಿಯಲ್ಲಿ ಯಲ್ಲಮ್ಮನಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂಬ ಗುರಿ ಹೊಂದಿದ್ದೇನೆ. ಭಕ್ತರಿಗೆ ಶುದ್ಧ ಕುಡಿಯುವ ನೀರು, ವಸತಿ, ಶೌಚಗೃಹ, ವಾಹನಗಳ ನಿಲುಗಡೆ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. 

ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ವೈ.ವೈ.ಕಾಳಪ್ಪನವರ, ಪುಂಡಲೀಕ ಮೇಟಿ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ, ಅಧೀಕ್ಷಕ ಅರವಿಂದ ಮಾಳಗೆ, ಮಲ್ಲು ಜಕಾತಿ, ಸವದತ್ತಿ ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಕಾರದಗಿ, ಪ್ರಭು ಪ್ರಭುನವರ, ಶಂಕ್ರಯ್ಯ ಪಾಟೀಲ, ದೀಪಕ ಜಾಣ್ವೇಕರ, ಆರ್.ಎಚ್.ಸವದತ್ತಿ, ಎಎಸ್ಐ ಎಸ್.ಆರ್.ಗಿರಿಯಾಲ, ಸದಾನಂದ ಈಟಿ, ವಿ.ಪಿ.ಸೊನ್ನದ, ಗೋವಿಂದರಾವ್ ಕುಲಕರ್ಣಿ, ದಿಲಾವರಸಾಬ್ ಬಾರಿಗಿಡದ ಇತರರಿದ್ದರು.

ಈ ವ್ರತದ ಪ್ರಯುಕ್ತ ಯಲ್ಲಮ್ಮ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ವಿವಿಧ ಧಾರ್ಮಿ ಕ ಕಾರ್ಯಕ್ರಮ ನೆರವೇರಿದವು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, ಎಲ್ಲರ ಅಮ್ಮ ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. 



ಸುದ್ದಿ ಓದಿ