ಕಾಗವಾಡ

ಅಂಗನವಾಡಿ ಮಕ್ಕಳಿಗೆ ಸ್ವಂತ ಖರ್ಚಿನಿಂದ ರೇಷನ್ ಕಿಟ್ ವಿತರಣೆ ಸಂಜು ಮಾನೆ ಕಾರ್ಯಕ್ಕೆ ಮೆಚ್ಚುಗೆ

ಅಂಗನವಾಡಿ ಮಕ್ಕಳಿಗೆ ಸ್ವಂತ ಖರ್ಚಿನಿಂದ ರೇಷನ್ ಕಿಟ್ ವಿತರಣೆ   ಸಂಜು ಮಾನೆ ಕಾರ್ಯಕ್ಕೆ ಮೆಚ್ಚುಗೆ

ಲೋಕದರ್ಶನ ವರದಿ 

ಅಂಗನವಾಡಿ ಮಕ್ಕಳಿಗೆ ಸ್ವಂತ ಖರ್ಚಿನಿಂದ ರೇಷನ್ ಕಿಟ್ ವಿತರಣೆ 

ಸಂಜು ಮಾನೆ ಕಾರ್ಯಕ್ಕೆ ಮೆಚ್ಚುಗೆ 


ಕಾಗವಾಡ 07: ತಾಲೂಕಿನ ಮೋಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾತ್ರಾಳ ಗ್ರಾಮದ ಸಮಾಜ ಸೇವಕ ಸಂಜು ಮಾನೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ-02 ರಲ್ಲಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಳ್ಳ ರೇಷನ್ ಕಿಟ್ ವಿತರಣೆ ಮಾಡಿ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 


ಸದಾ ಒಂದಿಲ್ಲೊಂದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಂಜು ಮಾನೆ ಇವರು ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತ ದೇಶದ ಪ್ರಜೆಗಳು. ಈ ನಿಟ್ಟಿನಲ್ಲಿ ಮಕ್ಕಳು ಆರೋಗ್ಯವಂತರಾಗಿ ಬೆಳೆದು, ದೇಶದ ಅಭಿವೃದ್ಧಿಗಾಗಿ ಶ್ರಮಿಸುವಂತಾಗಬೇಕೆಂಬ ಉದ್ದೇಶದಿಂದ ಗ್ರಾಮದ ಅಂಗನವಾಡಿ ಕೇಂದ್ರ-02 ರ ಮಕ್ಕಳಿಗೆ ಸೋಮವಾರ ದಿ. 06 ರಂದು ತಮ್ಮ ಸ್ವಂತ ಖರ್ಚಿನಿಂದ 1 ಕೆಜಿ ಅಕ್ಕಿ, 1 ಕೆಜಿ ಹೆಸರು ಬೆಳೆ, 250 ಗ್ರಾಮ್ ತುಪ್ಪ, 1 ಬಿಸ್ಕಿಟ್ ಪ್ಯಾಕ್ ಸೇರಿದಂತೆ ಹೀಗೆ ಹಲವು ಪೌಷ್ಟಿಕ ಆಹಾರಯುಕ್ತ ರೇಷನ್ ಕಿಟ್‌ಗಳನ್ನು ವಿತರಿಸಿದ್ದಾರೆ.  


ಸಮುದಾಯ ಆರೋಗ್ಯ ಕೇಂದ್ರದ ಸಿಎಚ್‌ಓ ಸಕ್ಕುಬಾಯಿ ಖವಾಸ್ತ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಂದಿನ ಮಕ್ಕಳೇ ನಾಳಿನ ಭವಿಷ್ಯ ರೂಪಿಸುವ ಪ್ರಜೆಗಳಾಗಲಿದ್ದು, ಸಮಾಜ ಸೇವಕ ಸಂಜು ಮಾನೆ ಅವರು ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಿ, ಮಕ್ಕಳು ಆರೋಗ್ಯವಂತಾಗಲು ಶ್ರಮಿಸುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. 


ಅಣ್ಣಾಸಾಬ ಕಾಂಬಳೆ, ಕಿರಣ ಕಾಂಬಳೆ, ಸುರೇಶ ಕಾಂಬಳೆ, ಶಿವಲು ನಾಯಿಕ, ಪ್ರೀತಮ ಕಾಂಬಳೆ, ಅಮೀತ ಕೋಳಿ, ರಾಜು ಮಳಮಸಿ, ಗುಲಾಬ ನಾಯಿಕ, ದುಂಡಪ್ಪಾ ಕಾಂಬಳೆ, ಸಮುದಾಯ ಆರೋಗ್ಯ ಕೇಂದ್ರದ ಸಿಎಚ್‌ಓ ಸಕ್ಕುಬಾಯಿ ಖವಾಸ್ತ, ಅಂಗನವಾಡಿ ಕಾರ್ಯಕರ್ತೆ ಶೋಭಾ ಕಾಂಬಳೆ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ