ವಿಕಲಚೇತನರ ಯಂತ್ರ ಚಾಲಿತ ವಾಹನಗಳ ವಿತರಣೆ
ಸವದತ್ತಿ 26: ಪಟ್ಟಣದ ಎಸ್.ಎಲ್.ಎ.ಓ ಕ್ರಾಸ್ ಹತ್ತಿರದ ನೀರಾವರಿ ಕಾಲನಿಯಲ್ಲಿ ಶಾಸಕ ವಿಶ್ವಾಸ ವೈದ್ಯರವರ ಜನಸಂಪರ್ಕ ಕಾರ್ಯಾಲಯವನ್ನು ಶನಿವಾರದಂದು ಉದ್ಘಾಟನೆಗೊಳಿಸಲಾಯಿತು.
ಶಾಸಕರ ನೂತನ ಕಾರ್ಯಾಲಯದ ಉದ್ಘಾಟನೆ ಪೂಜಾ ಸಮಾರಂಭಕ್ಕೆ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು.
ಶಾಸಕರ ನೂತನ ಕಚೇರಿ ಉದ್ಘಾಟನೆ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಮಂಜೂರಾದ ವಿಕಲಚೇತನರ ಯಂತ್ರ ಚಾಲಿತ ವಾಹನಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸರಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವಂತ ಕಾರ್ಯವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು. ಪ್ರವಾಸೋದ್ಯಮ ಇಲಾಖೆಯಡಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಲಾಗಿದ್ದು, ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ, ಡಾ.ಅಭಿನವಕುಮಾರ ಸ್ವಾಮೀಜಿ, ಬೆಟಸೂರಮಠದ ಅಜ್ಜಯ್ಯಸ್ವಾಮೀಜಿ, ಮಾಜಿ ಶಾಸಕ ಸುಭಾಸ ಕೌಜಲಗಿ, ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಕಾರದಗಿ, ಮಹಾಬಳೇಶ್ವರ ಪುರದಗುಡಿ, ಶಿವಾನಂದ ಪಟ್ಟಣಶೆಟ್ಟಿ, ಪುರಸಭೆ ಮಾಜಿ ಸದಸ್ಯ ಚಂದ್ರಣ್ಣ ಶಾಮರಾಯನವರ, ಪ್ರಭು ಪ್ರಭುನವರ, ರಾಮನಗೌಡ ತಿಪರಾಶಿ, ವೆಂಕಟೇಶ ವೈದ್ಯ, ಡಾ.ವಿಜಯ ನಾವದಗಿ, ಅಶ್ವತ ವೈದ್ಯ, ಮಲ್ಲಿಕಾರ್ಜುನ ಬೇವೂರ, ಮಲ್ಲು ಜಕಾತಿ, ದೀಪಕ ಜಾನ್ವೇಕರ, ಬಿ.ಎನ್.ಪ್ರಭುನವರ, ಮಹಾರಾಜಗೌಡ ಪಾಟೀಲ, ಚಂದ್ರು ಜಾಂಬ್ರಿ, ಈರ್ಪ ಚಿಕ್ಕುಂಬಿ, ಸಂತೋಷ ನೊರೆಯವರ, ಯಲ್ಲಪ್ಪ ಗೊರವನಕೊಳ್ಳ, ಪ್ರವೀಣ ರಾಮಪ್ಪನವರ, ಮಂಜು ಪಾಚಂಗಿ, ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಸಿಪಿಐ ಕರುಣೇಶಗೌಡ, ಸವದತ್ತಿ ಟಿಎಚ್ಓ ಡಾ.ಶ್ರೀಪಾದ ಸಬನೀಸ, ತಾ.ಪಂ ಇಓ ಯಶವಂತಕುಮಾರ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.