ಮುದ್ದೆಬಿಹಾಲ್

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ದಿನಸಿ ಕಿಟ್ ವಿತರಣೆ

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ದಿನಸಿ ಕಿಟ್ ವಿತರಣೆ

ಮುದ್ದೇಬಿಹಾಳ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಕಳೆದ 35 ವರ್ಷಗಳಿಂದ ಬಡವರಿಗೆ ದಿನಸಿ ಕಿಟ್ ನೀಡುತ್ತ ಬಂದಿರುವ ಸಮಾಜ ಸೇವಕ ಅಯೂಬ ಮನಿಯಾರ ಈ ವರ್ಷವೂ ಕೂಡ ತಮ್ಮ ನಿವಾಸದ ಎದುರು 250 ದಿನಸಿ ಕಿಟ್‌ಗಳನ್ನು ಮತ್ತು ಹಾಲು ಖರೀದಿಸಲೆಂದು ಪ್ರತೀ ಕಿಟ್‌ನ ಜೊತೆಗೆ 100 ರೂ.ಗಳನ್ನು ವಿತರಿಸಿ ಮಾನವೀಯತೆ ಮೆರೆದರು. 

ವಿತರಣಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಸಾಕಷ್ಟು ಜನರಲ್ಲಿ ಅಪಾರ ಹಣವಿದ್ದರೂ ದಾನ ಮಾಡುವ ಗುಣ ಇರಲ್ಲ. ಕೆಲವರುದಾನ ಮಾಡಬೇಕೆಂದರೂ ಸ್ವೀಕರಿಸಲು ಯಾರೂ ಮುಂದೆ ಬರಲ್ಲ. ಇಂಥವರ ಮಧ್ಯೆ ಮನಿಯಾರ ಅವರ ಸೇವೆಯನ್ನು ಸ್ವೀಕರಿಸಲು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ತಾಯಂದಿರು ಆಗಮಿಸುತ್ತಿರುವುದು ಮನಿಯಾರ್ ಅವರ ನಿಸ್ವಾರ್ಥ ಸೇವೆಯನ್ನು ಎತ್ತಿ ತೋರಿಸುತ್ತದೆ ಎಂದರು. 

ಲಾಲ್ ಹುಸೇನ ಕಂದಗಲ್‌ಅವರು ಮಾತನಾಡಿ, ಬಡವರನ್ನು ಕರೆದುಕೊಂಡು ಹಬ್ಬ ಆಚರಿಸುವ ಮನೋಭಾವ ಎಲ್ಲರಿಗೂ ಬೆಉವದಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ಬಡವರ ಸೇವೆ ಮಾಡುವ ಏಕೈಕ ವ್ಯಕ್ತಿ ಅಯೂಬ್ ಮನಿಯಾರ್ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು. 

ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಂ.ಎಚ್‌.ಕ್ವಾರಿ ಮಾತನಾಡಿ, ದಾನದಿಂದ ಧರ್ಮದಿಂದ ಗೆಲ್ಲಬೇಕು. ಧರ್ಮದಿಂದ ಎಲ್ಲವನ್ನೂ ಗೆಲ್ಲಬಹುದು ಎನ್ನುವ ತತ್ವವನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಅಯೂಬ್ ಮನಿಯಾರ. ಸಾಕಷ್ಟು ಬಡಜನರಿಗೆತಮ್ಮಕೈಲಾದ ನಿಸ್ವಾರ್ಥ ಸೇವೆಯನ್ನು ನೀಡುತ್ತಿರುವಅವರಿಗೆ ಹೆಚ್ಚೆಚ್ಚು ದಾನ ಮಾಡುವ ಶಕ್ತಿ ದೇವರು ನೀಡಲಿ ಎಂದರು. 

ನ್ಯಾಯವಾದಿಗಳಾದ ವಿ.ಎಸ್‌.ಸಾಲಿಮಠ ಮಾತನಾಡಿ, ದಾನವನ್ನು ದಾನದದೃಷ್ಠಿಯಿಂದ, ಉದಾರ ಮನಸ್ಸಿನಿಂದ ಕೊಡುವ ಏಕೈಕ ಗುಣ ಮನಿಯಾರ್ ಅವರಲ್ಲಿದೆ. ಪ್ರತೀ ವರ್ಷದೃಷ್ಟಿ ಕಳೆದುಕೊಂಡ ನೂರಾರು ಬಡವರಿಗೆ ಜಗತ್ತನ್ನು ನೋಡಲು ಅವಕಲಾಶ ಮಾಡಿಕೊಟ್ಟು ಅವರ ಕಣ್ಣಲ್ಲಿ ಸದಾ ಇರುವ ಅಯೂಬ್ ಮನಿಯಾರಅವರ ಸಾಮಾಜಿಕ ಸೇವೆಯನ್ನು ಬಣ್ಣಿಸಲು ಪದಗಳೇ ಇಲ್ಲ. ಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಅವರಿಂದ ನಾಡಿಗೆದೊರಕಲಿ ಎನ್ನುವುದೇ ನನ್ನ ಆಶಯ ಎಂದರು. 

ಸಮಾಜ ಸೇವಕ ಅಯೂಬ್ ಮನಿಯಾರ್ ಮಾತನಾಡಿ, ಬಡತನದ ಬೇಗೆಯಿಂದ ಬಳಲಿದ ನಾನು ಹಬ್ಬದ ದಿನಗಳು ಬಂದಾಗ ಮೊದಲು ನೆನಪಾಗುದೇ ಬಡವರು.ಅವರಿಗೆ ಏನಾದರೂ ಸಹಾಯ ಮಾಡಬೇಕುಎನ್ನುವ ಹಂಬಲ ನನ್ನದು. ನಾನೊಬ್ಬನೇ ಹಬ್ಬ ಆಚರಿಸಿದರೆ ದೇವರು ಮೆಚ್ಚಲಾರ. ಹಾಗಾಗಿ ಪ್ರತೀ ವರ್ಷ ನನ್ನಕುಟುಂಬಕ್ಕೆ ಹಬ್ಬದ ದಿನಸಿ ಖರೀದಿಸುವಾಗಲೇ ನನ್ನವರಿಗೂ ಖರೀದಿಸಿ ಅವರಿಗೆ ತಲುಪಿಸಿದ ನಂತರವೇ ನನಗೆ ಸಮಾಧಾನ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ನನ್ನ ಕುಟುಂಬಕ್ಕೆ ಆಶೀರ್ವದಿಸಿದರೆ ಸಾಕು ಎಂದರು. 

ಶಿಕ್ಷಕಿ ಗೀತಾ ಹುರಕಡ್ಲಿ ಮಾತನಾಡಿ, ತಮ್ಮ ಪತಿಯಕಿಡ್ನಿಆಪರೇಶನ್ ನಲ್ಲಿ ಸಹಾಯ ಮಾಡಿದ ಕ್ಷಣಗಳನ್ನು ನೆನೆದರು.ಮೌಲಾನಾಅಫ್ತಾಬ್ ಮುಫ್ತಿಅವರು ದಿವ್ಯ ಸಾನಿಧ್ಯ ವಹಿಸಿದಷ್ದರು. ಮೈಲಾನಾ ಅಲ್ಲಾಭಕ್ಷಖಾಜಿ  ಸಾನಿಧ್ಯ ವಹಿಸಿದ್ದರು. ಗಣ್ಯ ವ್ಯಾಪಾರಸ್ಥರಾದ ಬಸವರಾಜ ಮೋಟಗಿ, ನಿವೃತ್ತ ಪ್ರಾಶುಪಾಲ ಎಲ್‌.ಎಚ್‌.ಮಮದಾಪೂರ, ಡಾ. ವಿರೇಶ ಇಟಗಿ, ಅಯೂಬ್ ಮನಿಯಾರ್ ಅವರ ಪತ್ನಿ ಪರ್ವೀನ್ ಮನಿಯಾರ್, ಮಗ ಅಫ್ತಾಬ್ ಮನಿಯಾರ್, ಶಿಕ್ಷಕ ಜೆ.ಡಿ.ಮುಲ್ಲಾ ಸೇರಿದಂತೆ ಇತರರು ಭಾಗಿಯಾಗಿದ್ದರು. ಮುಜಾಹೀದ್ ನಮಾಜ ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 

ಬಾಕ್ಸ್‌ :  

ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದೇನೆ. ಈ ಬಾರಿ ಒಟ್ಟು 110 ಜನರಿಗೆ ಶಸ್ತ್ರಚಿಕಿತ್ಸೆಯ ಅವಶ್ಯತೆ ಇರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಫೋನ್‌ಕರೆ ಮಾಡಿ ನಮ್ಮ ಕಾರ್ಯಕರ್ತರು ತಿಳಿಸುತ್ತಿದ್ದಾರೆ. ಏ24 ರಿಂದ ಬೆಳಿಗ್ಗೆ 7 ಗಂಟೆಯ ಒಳಗಾಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮನಿಯಾರ್ ಕಾಂಪ್ಲೆಕ್ಸ್‌ ಬಳಿ ಬರಬೇಕು ಎಂದು ಮನಿಯಾರ್ ಅವರು ಕಣ್ಣಿನ ಶಸ್ತ್ರಚಿಕಿತ್ಸೆಯ ಫಲಾನುಭವಿಗಳಿಗೆ ತಿಳಿಸಿದರು. 


ಸುದ್ದಿ ಓದಿ