ಶಿಗ್ಗಾವ್

ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್‌ಬುಕ್ ವಿತರಣೆ

ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್‌ಬುಕ್ ವಿತರಣೆ

ಶಿಗ್ಗಾವಿ 03:  ಮನುಷ್ಯ ತನಗಿಷ್ಟವಾದ ಸಂಪತ್ತನ್ನು ಗಳಿಸಬಹುದು. ಆದರೆ ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೂ ಹಂಚುವ ಮನೋಭಾವ ಹೊಂದಿರಬೇಕು ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು. 

ತಾಲೂಕಿನ ಹೊಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ ಬುಕ್ ವಿತರಿಸಿ ಮಾತನಾಡಿದ ಅವರು ಕೋರೊನಾದಿಂದ ಚೇತರಿಸಿಕೊಂಡು ಬಂದ ಮೇಲೆ ಇಡುವದಕ್ಕಿಂತ ಕೊಟ್ಟು ಹೋಗುವದು ಒಳ್ಳೆಯದು ಎಂದು ತಿಳಿದುಕೊಂಡಿದ್ದು ನಮ್ಮ ಸಂಸ್ಥೆಯಿಂದ ಉಚಿತ ಬಸ್ ಪಾಸ್ ವಿತರಣೆ ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದೆವೆ,  

ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಉಚಿತ ನೊಟ್ ಬುಕ್ ವಿತರಣೆ ಮಾಡುತ್ತಿದ್ದೆವೆ, ನಮ್ಮ ರೆಸಾರ್ಟನ್ನು ವಿಶ್ವ ಮಟ್ಟಕ್ಕೆ ಒಯುವ ತಿರ್ಮಾನ ಮಾಡಿದ್ದೆವೆ, ಯಾವುದೇ ಕೆಲಸವನ್ನು ಸವಾಲಾಗಿ ತೆಗುದುಕೊಂಡು ಮಾಡಿದರೆ ಯಾವುದು ದೊಡ್ಡದಲ್ಲ, ಅದೇ ರೀತಿ ತಾಲೂಕಿನ ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೆನೆ ಎಂದರು. 

ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಪ್ಪ ಲಮಾಣಿ ಮಾತನಾಡಿ ಶಶಿಧರ ಯಲಿಗಾರ ಅಣ್ಣನವರು ನಮ್ಮ ಹಲವಾರು ಅಭಿವೃದ್ದಿ ಕಾರ್ಯಗಳಲ್ಲಿ ಸಹಾಯ ಮಾಡಿದ್ದಾರೆ, ಕೋವಿಡ್ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ನಮ್ಮ  ಗ್ರಾಮದ ಹಲವಾರು ಕುಟುಂಬದವರಿಗೆ ಮಕ್ಕಳಿಗೆ ಸಹಾಯ ಹಸ್ತ ಚಾಚಿದ್ದಾರೆ  ಗ್ರಾಮ ಪಂಚಾಯತಿ ವ್ಯಾಪ್ತಿಯ 8 ಶಾಲೆಗಳಿಗೆ ವಿತರಿಸಿದ್ದು ಹರ್ಷವನ್ನು ತಂದಿದೆ  ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿದ ಯಲಿಗಾರ ಅವರಿಗೆ ಕೃತಜ್ಞೆಗಳನ್ನು ಸಲ್ಲಿಸುತ್ತೆವೆ ಎಂದರು. 

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಅಧ್ಯಕ್ಷರು ಸದಸ್ಯರು ಎಪಿಎಂಸಿ ಮಾಜಿ ಅಧ್ಯಕ್ಷ ಹರ್ಜಪ್ಪ ಲಮಾಣಿ, ನಿವೃತ್ತ ಶಿಕ್ಷಕ ನಿತ್ಯಾನಂದ ಬರದೂರ, ಈರಣ್ಣಾ ಡವಗಿ, ನಾಗರಾಜ ಸೂರಗೊಂಡ, ಕುಲಕರ್ಣಿ, ಶಿವನಗೌಡ ಪಾಟೀಲ, ಸೇರಿದಂತೆ ಗ್ರಾಮಸ್ಥರು ಪಾಲಕರು ಜನಪ್ರತಿನಿಧಿಗಳು ಸೇರಿದಂತೆ ಹಲವರು ಇದ್ದರು. 

ಕಾರ್ಯಕ್ರಮದಲ್ಲಿ ಸಿ ಬಿ ಯಲಿಗಾರ ಸೇವಾ ಸಂಸ್ಥೆಯವತಿಯಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ನರಸಿಂಘ ಕುಮಾರ ಕೇಮಾರ ಪ್ರಾಸ್ಥಾವಿಕವಾಗಿ ಮಾತನಾಡಿದರು.  ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ