ಮಕ್ಕಳಿಗೆ ಉಚಿತ ಅಂಕಲಿಪಿ ಪುಸ್ತಕ ವಿತರಣೆ
ಶಿಗ್ಗಾವಿ 22: ಪಟ್ಟಣದ ಮೆಹಬೂಬ ನಗರದಲ್ಲಿರುವ ಅಂಗನವಾಡಿ ಕೇಂದ್ರ 7ರಲ್ಲಿರುವ ಮಕ್ಕಳಿಗೆ ಉಚಿತವಾಗಿ ಅಂಕಲಿಪಿ ಪುಸ್ತಕ ನೀಡುವುದರ ಮೂಲಕ ತಮ್ಮ 49 ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ ಆಚರಿಸಿಕೊಂಡರು.
ಪುಸ್ತಕ ನೀಡಿ ಮಾತನಾಡಿದ ಅವರು ಅಂಗನವಾಡಿ ಕೇಂದ್ರ ಇದು ಅವರ ಶಾಲೆಗೆ ಹೋಗಲು ಪ್ರೇರೆಪಿಸುವ ಹಾಗೂ ಮಮತೆ, ಪ್ರೀತಿ ವಾತ್ಸಲ್ಯವನ್ನು ನೀಡುವ ಕೇಂದ್ರವಾಗಿದ್ದು ಇಲ್ಲಿಗೆ ಬರುವ ಮಕ್ಕಳು ಕಡುಬಡವರು, ದೀನದಲಿತರು, ಪೌರ ಕಾರ್ಮಿಕರ ಮಕ್ಕಳಿಗೆ ನೀಡಿದರೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಅಂಕಲಿಪಿ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಎನ್.ಎಮ್.ಕುಂದಗೋಳ, ಸುರೇಶ ಹರಿಜನ, ಮಂಜುನಾಥ ಕಂಕನವಾಡ, ಶೇಖರ ಲಮಾಣಿ, ಪರುಶರಾಮ ಈಳಗೇರ, ಚಂದ್ರ್ಪ ಹರಿಜನ ಸೇರಿದಂತೆ ಮಕ್ಕಳು ತಾಯಂದಿರು ಇದ್ದರು.