ಸವಿತಾ ಸಮಾಜ, ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ
ಚಿಕ್ಕೋಡಿ 15: ಸವಿತಾ ಸಮಾಜ ಬಾಂಧವರು ಕಾಯಕ ಶ್ರೇಷ್ಠ ಕಾಯಕವಾಗಿದೆ. ಲಾಕಡೌನದಲ್ಲಿ ಅವರ ಕುಟುಂಬಗಳು ಸಂಕಷ್ಟ ಎದುರಿಸಬಾರದೆಂದು ಮನಗಂಡು ಎಂ.ಕೆ.ಕವಟಗಿಮಠ ಚ್ಯಾರಿಟಿ ಫೌಂಡೇಶನ ಆಹಾರ ಕಿಟ್ ನೀಡಿರುವ ಕಾರ್ಯ ಶ್ಲಾಘನೀಯ ಎಂದು ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ಹೇಳಿದರು.
ಇಲ್ಲಿನ ಚರಮೂರ್ತಿಮಠದಲ್ಲಿ ಮಂಗಳವಾರ ಸವಿತಾ ಸಮಾಜ ಹಾಗೂ ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಲಾಕ್ ಆನ್ ಲಾಕ್ವಾದಲ್ಲಿ ನಾವೆಲ್ಲಾ ಸ್ವಯಂ ಜಾಗೃತರಾಗೋಣ ಎಂದರು.
ವಿಧಾನ ಪರಿಷತ್ ಸರಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸವಿತಾ ಸಮಾಜ ಬಾಂಧವರು ಶ್ರಮಜೀವಿಗಳಾಗಿದ್ದಾರೆ. ಅವರ ಕಷ್ಟಕ್ಕೆ ಸ್ಪಂದನೆ ಮಾಡುವ ನಿಟ್ಟಿನಲ್ಲಿ ಎಂ.ಕೆ.ಕವಟಗಿಮಠ ಚಾರೀಟಿ ವತಿಯಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸವಿತಾ ಸಮಾಜ ಬಾಂಧವರು ಲಾಕ್ ಡೌನ್ ಮುಗಿದ ನಂತರ ತಮ್ಮ ಕಾಯಕವನ್ನು ಮಾಡುವಾಗ ಸ್ಯಾನಿಟೈಜರ ಬಳಕೆ ಮಾಡಿಕೊಂಡು ತಮ್ಮ ಕಾಯಕ ಮುಂದುವರೆಸಿಕೊಂಡು ಹೋಗುವಂತೆ ಜನರಲ್ಲಿ ಮನವಿ ಮಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸವಿತಾ ಸಮಾಜದವರ ಕೊಡುಗೆ ಅವಶ್ಯಕ ಎಂದರು.ಕ್ಷೌರಿಕ ಸಮಾಜದವರ ಸಂಕಷ್ಟಕ್ಕೆ ಸ್ಪಂದನೆ ಮಾಡುವ ಕಾರ್ಯ ಮಾಡಲಾಗುವದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷ ಪ್ರವೀನ ಕಾಂಬಳೆ, ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಮಹೇಶ ಭಾತೆ, ಅಜಯ ಕವಟಗಿಮಠ, ಚಿಕ್ಕೋಡಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವತಪುರ, ವಿಶ್ವನಾಥ ಕಾಮಗೌಡರ, ಶಕುಂತಲಾ ಡೋಣವಾಡೆ, ಡಾ. ಪೂಜಾ ಅಜಿತ ಹುಂಡೇಕರ, ಶರತಚಂದ್ರ ಕವಟಗಿಮಠ, ಶೇಖರ ಚಿತವಾಟಗಿ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಪ್ರೊ.ಸುರೇಶ ಉಕ್ಕಲಿ ನಿರೂಪಿಸಿದರು.