ಸಂಸದ ಉದಾಸಿಯಿಂದ ಅಂಧ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ರಾಣಿಬೆನ್ನೂರ 01: ಕೊರೋನಾ ಹರಡುವಿಕೆಯನ್ನು ತಡೆಯುವ ಮುಂಜಾಗೃತ ಕ್ರಮವಾಗಿ ರಾಜ್ಯ ಲಾಕ್ಡೌನ್ ಆದ ಪರಿಣಾಮ ಅವಯುವಗಳು ಸರಿ ಇರುವ ಜನರು ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಅಂತಹದ್ದರಲ್ಲಿ ಅಂಧರ ಬದುಕು ಇನ್ನೂ ಕಷ್ಟ. ಅದನ್ನು ಅರಿತ ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆಯ ಆಡಳಿತ ಮಂಡಳಿ ಸಹಾಯ ಹಸ್ತ ಚಾಚಿರುವುದು ಶ್ಲಾಘನೀಯ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಮಂಗಳವಾರ ನಗರದ ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆಯ ವತಿಯಿಂದ ನೀಡಲಾದ ಜಿಲ್ಲೆಯ 300 ಅಂಧ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಮಗುವಿನ ಸಂಸ್ಕಾರ ಗರ್ಭಧಾರಣೆಯಿಂದ ಹಿಡಿದು ಭೂಗರ್ಭಕ್ಕೆ ಹೊಗುವತನಕ ಸಂಸ್ಕಾರವಿರಬೇಕು. ಪ್ರಾಣಿಪಕ್ಷಿಗಳಲ್ಲಿ ನಾವು ಸಂಸ್ಕಾರವನ್ನು ಕಾಣುತ್ತೆವೆ. ಆದರೆ ಅರಿವಿನ ಜ್ಮತಾಳಿದ ಮನುಷ್ಯ ಸಂಸ್ಕಾರದಿಂದ ವಂಚಿತನಾಗಬಾರದು ಎಂದರು.
ಇಂತಹ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿರುವ ಹುಟ್ಟು ಕುರುಡರಾದ ಪಾಲ ಮುದ್ದಾ ಹಾಗೂ ಕೆ.ಜಿ.ಮೋಹನ ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆ ಸ್ಥಾಪಿಸಿ ತನ್ನೂಲಕ ಅಂಧ ಅಂಗವಿಕಲರ ಸೇವೆ ಮಾಡುವ ಮೂಲಕ ತಮ್ಮ ಜೀವನವನ್ನೆ ಮುಡುಪಾಗಿಟ್ಟದ್ದಾರೆ. ಸಮಾನ ಮನಸ್ಸುಳ್ಳವರಿಂದ ಸಹಾಯ ಪಡೆದು ಅಂಧರ ಹಸಿವು ನೀಗಿಸುವ ಕಾರ್ಯ ಮೆಚ್ಚುಗೆಯಾಗಿದೆ. ಅವರು ಸಲ್ಲಿಸುವ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.
ಕರೊನಾ 1ನೇ ಮತ್ತು 2ನೇ ಅಲೆಯನ್ನು ಎದುರಿಸಿದ್ದೇವೆ, ಪ್ರಸ್ತುತ 3ನೇ ಅಲೆ ಹರಡುವ ಮುನ್ಸೂಚನೆಯನ್ನು ತಜ್ಞರು ಈಗಾಗಲೆ ಎಚ್ಚರಿಕೆ ನೀಡಿದ್ದಾರೆ. ಈಗ 2ನೇ ಅಲೆ ಹರಡುವಿಕೆ ಕ್ಷೀಣಿಸುತ್ತಿದೆ, ಆದರೆ ಸಾರ್ವಜನಿಕರು ಮೈರೆಯದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಕೈಗಳಿಗೆ ಸ್ಯಾನಿಟೇಸರ ಬಳಸಬೇಕು, ಅವಶ್ಯವಿದ್ದಾಗ ಮಾತ್ರ ಹೊರಗಡೆ ಬರಬೇಕು ಎಂದರು.
ಸುಮಾರು 15 ವರ್ಷಗಳ ಹಿಂದೆ ಸೋಷಿಯಲ್ ಮಿಡಿಯಾ ಇದ್ದಿದ್ದರೆ ಡೆಂಘ್ಯು ಜ್ವರ ಜನರನ್ನು ನಿದ್ದೆಗೆಡಿಸುತ್ತಿತ್ತು. ಇಂದು ಸೋಷಿಯಲ್ ಮಿಡಿಯಾ ಕೊರೋನಾ ಹಾವಳಿಯನ್ನು ಜನರಿಗೆ ಪರಿಚಯಿಸುವ ಮೂಲಕ ಎಚ್ಚರಿಸಿದೆ. ಆದಾಗ್ಯು ಇದರ ಭಯದಲ್ಲಿ ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಇಂದು ಯಾವುದೇ ಕಾಯಿಲೆ ಜನರಿಗೆ ಅರಿವು ಬಾರದೆ ಬರೀ ಕೊರೋನಾ ಕಾಣುವಂತಾಗಿದೆ ಎಂದರು.
ಇದಕ್ಕೆ ಪರಿಹಾರ ಲಸಿಕೆ ಪಡೆಯುವುದು ಒಂದೇ ದಾರಿ. ಕೊರೋನಾ ಬಗ್ಗೆ ಭಯಬೇಡ ಎಚ್ಚರಿಕೆ ಇರಲಿ, ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚು ಲಸಿಕೆ ಪಡೆಯುತ್ತಿದ್ದಾರೆ. ಪ್ರಸ್ತುತ ನಗರದ ಜನರು ಎಚ್ಚರಿಕೆ ವಹಿಸಿ ಲಸಿಕೆ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆರೋಗ್ಯ ಇಲಾಖೆಯ ಸಹಕಾರದಿಂದ ಪ್ರತಿ ವಾರ್ಡನಲ್ಲೂ ಲಸಿಕೆ ಪಡೆಯುವ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ ಎಂದು ಉದಾಸಿ ಸಲಹೆ ನೀಡಿದರು.
ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆ ಧರ್ಮದರ್ಶಿಗಳಾದ ಡಾಽ ಪಾಲ ಮುದ್ದಾ, ಕೆ.ಜಿ.ಮೋಹನ ಮಾತನಾಡಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾಽ ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷಕುಮಾರ ಪಾಟೀಲ, ನಗರಸಭಾ ಸದಸ್ಯರಾದ ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಡಾಽ ಗೀರೀಶ ಕೆಂಚಪ್ಪನವರ, ಬಸವರಾಜ ಹುಲ್ಲತ್ತಿ, ವಿ.ಪಿ.ಲಿಂಗನಗೌಡ್ರ, ವಸಂತ ಹುಲ್ಲತ್ತಿ, ಗೀರೀಶ ಬುಡ್ಡನವರ, ವಿನಾಯಕ ಕೆಂಚಪ್ಪನವರ, ಮಾರುತಿ ಸೇರಿದಂತೆ ಇತರರು ಇದ್ದರು. ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಶಾಸಕ ಸಿ.ಎಂ.ಉದಾಸಿ ಅವರಿಗೆ ಒಂದು ನಿಮಿಷ ಮೌನಾಚಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.