ಆಹಾರ ಧಾನ್ಯಗಳ ಕಿಟ್ ವಿತರಣೆ
ಗದಗ 03: ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕದ ವತಿಯಿಂದ ಬಡವರಿಗೆ ಆಸರೆಯಾಗಲಿ ಎಂದು ಕಾಣಿಕೆ ಡಬ್ಬಿ ರೆಡಿ ಮಾಡಿದ್ದೀವಿ ಕೆಲವರಿಗೆ ಕಾಣಿಕೆ ಡಬ್ಬಿ ನೀಡಲಾಗಿದೆ ಅದರಲ್ಲಿ ಬಂದಿರುವಂತಹ ಹಣದಿಂದ ಇದು ನಾಲ್ಕನೇ ತಿಂಗಳು ಗದಗ ನಗರದ ಸಿದ್ದು ಕಲ್ಲನಗೌಡ್ರು ಈ ಕುಟುಂಬಕ್ಕೆ ದಿನನಿತ್ಯ ಬೇಕಾಗಿರುವಂತಹ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ ನಾವು ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕದ ವತಿಯಿಂದ ಬಡವರಿಗೋಸ್ಕರ ಕಾಣಿಕೆ ಡಬ್ಬಿ ರೆಡಿ ಮಾಡಿದ್ದೀವಿ ಕೆಲವರಿಗೆ ನೀಡಲಾಗಿದೆ ಅದರಲ್ಲಿ ಬಂದಿರುವಂತಹ ಹಣದಿಂದ ನಾವು ಯಾವುದಾದರೂ ಒಂದು ಬಡ ಕುಟುಂಬಕ್ಕೆ ದಿನನಿತ್ಯ ಬೇಕಾಗಿರುವಂತ ಆಹಾರ ಕಿಟ್ ನೀಡಲಾಗುವುದು ಬಡವರ ಸೇವೆಗಾಗಿ ನೀವು ಕೂಡ ಕೈಜೋಡಿಸಿ ಯಾರಾದ್ರೂ ಕಾಣಿಕೆ ಡಬ್ಬಿ ಬೇಕಾದಲ್ಲಿ ಸಂಪರ್ಕಿಸಿ ಕ್ರಾಂತಿ ಸೇನಾ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ 8548954382 ಈ ನಂಬರಿಗೆ ಸಂಪರ್ಕಿಸಿ ಬಡವರ ಸೇವೆಯೇ ದೇವರ ಸೇವೆ ಬಡವರ ಸೇವೆಯಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಕಾರ್ಯದರ್ಶಿ ಪವನ್ ಪುರದ್, ಕಾರ್ಯದರ್ಶಿ ರಾಮು ಕಬಾಡಿ, ರವಿ ಸರಟೂರ್, ಸುಮಿತ್ ಕಬಾಡಿ, ಹರೀಶ್ ಪೂಜಾರಿ, ಮಲ್ಲೇಶ್ ಪತ್ತಾರ್, ಸಾಗರ್, ಕೋಸಂದರ್ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.