ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ವಿತರಣೆ
ಲೋಕದರ್ಶನ ವರದಿ,
ಜಮಖಂಡಿ: 24: ಧರ್ಮಸ್ಥಳ ಸಂಸ್ಥೆ ಮಹಿಳೆಯರಿಗೆ ಆರ್ಥಿಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ತೊಡಗಿಕೊಂಡಿದೆ. ಸಾಮಾಜಿಕ ಆರ್ಥಿಕ ಮತ್ತು ಧಾರ್ಮಿಕ ಚಟುವಟಿಕೆಯೊಂದಿಗೆ ಸಂಸ್ಥೆಯ ರಾಜ್ಯದ ಎಲ್ಲ ಮಹಿಳಾ ಸದಸ್ಯರಿಗೆ 36 ಯೋಜನೆಗಳನ್ನು ಧರ್ಮಸ್ಥಳದ ಡಾ.ವಿರೇಂದ್ರ ಹೆಗಡೆ ಅನುಷ್ಠಾನಗೊಳಿಸಿದ್ದಾರೆಂದು ತಾಲೂಕ ಯೋಜನಾಧಿಕಾರಿ ಜಿ.ನಿಂಗಪ್ಪ ಹೇಳಿದರು.
ನಗರದ ಶ್ರೀಸಿದ್ಧಕ್ಷೇತ್ರ ಸಿದ್ಧಮುತ್ತ್ಯಾ ದೇವಸ್ಥಾನ ಆವರಣದಲ್ಲಿ ಜಮಖಂಡಿ ವಲಯ ಮುಂಜಿಗಲ್ಲಿ ಒಕ್ಕೂಟ ಸಭೆ ಮತ್ತು ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ರಾಜ್ಯದ ಮಹಿಳೆಯರಿಗೆ ಸಾಮಾಜಿಕ ಜವಾಬ್ದಾರಿ, ಶೈಕ್ಷಣಿಕ ಮಹತ್ವ, ಆಥರ್ಿಕ ಬಲಿಷ್ಠತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಧರ್ಮಸ್ಥಳದ ಸಂಸ್ಥೆ ಎಲ್ಲ ಸದಸ್ಯರು, ಪದಾಧಿಕಾರಿಗಳು ಯೋಜನೆಗಳ ಮಹತ್ವ ಅರಿತು ಅನುಷ್ಠಾನ ಗೊಂಡಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿಗೊಳಿಸಬೇಕು. ಯಾವ ಯೋಜನೆಗಳು ಬಲವಂತದ ಯೋಜನೆಗಳು ಆಗಿರುವದಿಲ್ಲ. ಅದರ ಉಪಯೋಗ ಲಾಭವನ್ನು ಅರಿತುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಪ್ರೇಮಾ ಶಿಂಧೆ, ಭಾರತಿ ಮಳಗಾಂವಿ, ರಾಜಶ್ರೀ ಚಕ್ರಸಾಲಿ, ಸುಕನ್ಯಾ ಹಳ್ಳೂರ, ಕಲಾವತಿ ಪರಮಗೊಂಡ, ಪತ್ರಕರ್ತ ಮಲ್ಲೇಶ ಆಳಗಿ, ವಲಯ ಮೇಲ್ವಿಚಾರಕಿ ಪದ್ಮಾ ಕುಳ್ಳೋಳಿ ಸಹಿತ ಹಲವರು ಇದ್ದರು.
ಇದೇ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಸುಜ್ಞಾನ ನಿಧಿ ಶಿಷ್ಯವೇತನ ಮಂಜುರಾತಿ ಪಡೆದ ವಿದ್ಯಾರ್ಥಿಗಳಾದ ರಹಿಸಾ ಇಂಡಿಕರ, ರಚೀತಾ ಪರಮಗೊಂಡ, ತರುಣ ಬೊಂಬಳೆಕರ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಮಹಿಳಾಸದಸ್ಯರಾದ ರೇಣುಕಾ ಮೇಲ್ದಾಪೂರ ಸ್ವಾಗತಿಸಿದರು. ಮಹಾನಂದಾ ಚಿತ್ತಾಪೂರ ನಿರೂಪಿಸಿದರು. ಸೇವಾ ಪ್ರತಿನಿಧಿ ಎಂ.ಸರೋಜನಿ ವಂದಿಸಿದರು.