ಹನುಮಾನ ಚಾಲೀಸ ಪುಸ್ತಕ ವಿತರಣೆ
ಸವದತ್ತಿ 21: ಸಮೀಪದ ಮುನವಳ್ಳಿ ಪಟ್ಟಣದ ಸಮಾಜ ಸೇವಾ ಸಂಸ್ಥೆಯಾದ ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಗಾಂಧಿನಗರದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹನುಮಾನ ಚಾಲೀಸ ಪುಸ್ತಕ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಗೌರಿ ಜಾವೂರ ಅಧ್ಯಕ್ಷತೆ ವಹಿಸಿದ್ದರು.
ಶಾರದಾ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಜಗತ್ತಿನಲ್ಲಿ ಅತ್ಯುತ್ತಮವಾದ ಮಂತ್ರಗಳಲ್ಲಿ ತುಲಸೀದಾಸರು ರಚಿಸಿರುವ ಹನುಮಾನ ಚಾಲೀಸ ಮಂತ್ರವು ಶ್ರೇಷ್ಠವಾದುದಾಗಿದೆ ಇದರ ಪಠಣದಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುವುದು, ಉಚ್ಛಾರವು ಸರಿಯಾಗುವುದು, ಓದಲು ಆಸಕ್ತಿ ಹೆಚ್ಚುವುದು, ಆರೋಗ್ಯ, ಶಿಕ್ಷಣ, ವಿವಿಧ ತೊಂದರೆಗಳು ಪಠಣದಿಂದ ದೂರವಾಗುತ್ತವೆ, ಮಾನಸಿಕ ಶಾಂತಿ ಲಭಿಸುತ್ತದೆ. ಗಾಯತ್ರಿ ಮಂತ್ರವು ಪ್ರಥಮ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿರುವುದು ಹನುಮಾನ ಚಾಲೀಸ ಎಂದರು. ಕಾರ್ಯಕ್ರಮದಲ್ಲಿ ಪ್ರಗು ಎಚ್.ಎಸ್.ಮನಿಯಾರ, ಅನುರಾಧಾ ಬೆಟಗೇರಿ, ಉಮಾ ಹಂಪಣ್ಣವರ, ಸುಜಾತಾ ಕೋರಿ, ಮುಕ್ತಾ ಪಶುಪತಿಮಠ, ಸುಷ್ಮಾ ಗೋಮಾಡಿ, ಗೀತಾ ಜಾವೂರ, ಪ್ರೀತಿ ಕರೀಕಟ್ಟಿ, ವಿ.ವಿ.ಕೊಳಕಿ, ರಜನಿ ನಾಯ್ಕ, ಹೇಮಾ ಹೊನ್ನಳ್ಳಿ, ರೇಖಾ ಶಾನಭೋಗ, ಮಂಗಲಾ ಉಪ್ಪಾರಗುರು, ಸುಧಾ ಶಾನಭೋಗ ಸೇರಿದಂತೆ ಇತರರಿದ್ದರು.