ರಾಣೆಬೆನ್ನೂರ

ಸಚಿವರ ಅನುದಾನದಲ್ಲಿ 3 ಅಂಬ್ಯುಲೆನ್ಸ್‌ ವಿತರಣೆ

ಸಚಿವರ ಅನುದಾನದಲ್ಲಿ 3 ಅಂಬ್ಯುಲೆನ್ಸ್‌ ವಿತರಣೆ

ರಾಣೀಬೆನ್ನೂರ 30: ಜಿಲ್ಲೆಯಲ್ಲಿ ಕಳೆದ ವರ್ಷ ಕರೋನಾ ವೈರಸ್ ಮುಕ್ತವಾಗಿದ್ದೆವು ಆದರೆ ಈ ಬಾರಿ ಇದರಿಂದ ನಾಗರೀಕರು ತಪ್ಪಿಸಿಕೊಳ್ಳಲು ಹರಸಾಹಸ ಮಾಡಿದರೂ ಕೈ ಮೀರಿದ್ದರಿಂದ ಸಕಾಲಕ್ಕೆ ಆಮ್ಲಜನಕ ದೊರೆಯದ ಕಾರಣ ಹಲವರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಪ್ರಸ್ತುತ ಸಂದರ್ಭದಲ್ಲಿ ಕೋವಿಡ್ ಇಳಿಕೆ ಕಡಿಮೆಯಾಗುತ್ತಿದ್ದು ಆದರೂ ನಿರ್ಲಕ್ಷ್ಯ ವಹಿಸದೇ ಸಾರ್ವಜನಿಕರು, ವೈದ್ಯರು ಮತ್ತು ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಚಾಚು ತಪ್ಪದೇ ಪರಿಪಾಲಿಸಿ ಕರೋನಾವನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಜಾಗೃತರಾಗಿರಬೇಕು ಎಂದು ರೇಷ್ಮೆ ಕೃಷಿ ಮತ್ತು ತೋಟಗಾರಿಕಾ ಸಚಿವ ಆರ್‌. ಶಂಕರ್ ಹೇಳಿದರು. 

ಅವರು ಸೋಮವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ  ಸಚಿವರ ಅನುದಾನದಲ್ಲಿ 3 ಅಂಬ್ಯುಲೆನ್ಸ್‌ ವಾಹನ ಲೋಕಾರೆ​‍್ಣಗೊಳಿಸಿ ಮಾತನಾಡಿದರು. ತಾವು ಕಳೆದ 2ತಿಂಗಳ ಹಿಂದೆ ನಗರದಲ್ಲಿ ಮುಖ್ಯವಾಗಿ ಇರುವ ಸಮಸ್ಯೆ ಏನು ಎನ್ನುವುದನ್ನು  ತಿಳಿದುಕೊಂಡಿದ್ದೆ ಅಂಬ್ಯುಲೆನ್ಸ್‌ ವಾಹನ ವಿಲ್ಲದೇ ಆಸ್ಪತ್ರೆಗೆ ರೋಗಿಗಳು ಧಾವಿಸಲು ಹರಸಾಹಸ ಪಡಬೇಕಾಗಿತ್ತು. ಇದನ್ನು ಗಮನಿಸಿ ಸರ್ಕಾರಿ ಆಸ್ಪತ್ರೆಗೆ ಒಂದು, ಮೇಡ್ಲೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಹಾಗೂ ಅಂಜುಮನ್ ಸಂಸ್ಥೆಗೆ ಒಂದು ಹೀಗೆ 3 ಅಂಬ್ಯುಲೆನ್ಸ್‌ ವಾಹನ ವಿತರಿಸಲಾಗಿದೆ. ಇನ್ನೂ ಕೆಲ ಸಂಘ-ಸಂಸ್ಥೆಯವರು ಮನವಿ ಸಲ್ಲಿಸಿದ್ದು ಆದ್ಯತೆ ಮೇರೆಗೆ ಸರ್ಕಾರದಿಂದ ಮಂಜೂರಿ ಮಾಡಿಸುವುದಾಗಿ ಹೇಳಿದರು.  

ವೈದ್ಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಸಂಘ-ಸಂಸ್ಥೆಗಳು ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರಿಂದ ಇಂದು ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು 3ನೇ ಅಲೆಯ ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸದಾ ಜಾಗರೂಕರಾಗಿ 3ನೇ ಅಲೆ ಎದುರಿಸಬೇಕಾಗಿದೆ ಆದ್ದರಿಂದ ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ ಉಳಿಸಲು ಸಹಕಾರಿಗಳಾಗಬೇಕೆಂದರು.  ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ವಾಕರಾ ಸಂಸ್ಥೆಯ ಉಪಾಧ್ಯಕ್ಷ ಡಾಽಽ ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷ ಕುಮಾರ ಪಾಟೀಲ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮಾತನಾಡಿದರು. ಮುಖಂಡರುಗಳಾದ ಕೆ. ಶಿವಲಿಂಗಪ್ಪ, ಬಸವರಾಜ ಕೇಲಗಾರ, ದೀಪಕ್ ಹರಪನಹಳ್ಳಿ, ರಮೇಶ ಗುತ್ತಲ, ಪಾಂಡುರಂಗ ಗಂಗಾವತಿ, ಸಿದ್ದಪ್ಪ ಬಾಗಲದ, ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಪ್ರಭಾವತಿ ತಿಳವಳ್ಳಿ, ಹುಚ್ಚಪ್ಪ ಮೆಡ್ಲೇರಿ, ಪ್ರಕಾಶ ಪೂಜಾರ, ನಿಂಗಪ್ಪ ಕೋಡಿಹಳ್ಳಿ, ನಾಗರಾಜ ಪೋಲೀಸ್‌ಗೌಡ್ರ, ವಿಶ್ವನಾಥ ಹೊಳಬಾಗಿಲ, ರತ್ನಾಕರ ಕುಂದಾಪುರ, ಹೆಚ್‌.ಡಿ. ಬಡಕರಿಯಪ್ಪನವರ, ರಾಜು ಅಡಿವೆಪ್ಪನವರ, ಜಗದೀಶ ಯಲಿಗಾರ ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ