ಆರ್ಟಿಇಎಸ್ ಕಾಲೇಜಿನಲ್ಲಿ 2ನೇ ಹಂತದ ಲಸಿಕಾ ವಿತರಣೆ
ರಾಣೇಬೆನ್ನೂರು 21: ನಗರ ಹೂರ ವಲಯದ ಆರ್.ಟಿ.ಇ.ಎಸ್ ಕಾಲೇಜು ವಿ.ಕೆ ಸಾವುಕಾರ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಸಹಯೋಗದಲ್ಲಿ ದ್ವಿತೀಯ ಹಂತದ ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಎಫ್.ಹೆಚ್. ಮಾಚೇನಹಳ್ಳಿ ಅವರು ಕೋವಿಡ್ ಲಸಿಕಾ ಕಾರ್ಯಕ್ರಮವು ಕಳೆದ 2 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವೈರಸ್ ನಿವಾರಣೆಗಾಗಿ ಹಗಲಿರುಳು ಎನ್ನದೇ ನಿರಂತರವಾಗಿ ಪ್ರಯತ್ನ ಪಟ್ಟಿದ್ದರಿಂದ ಇಂದು ಮನುಷ್ಯ ರೋಗ ಮುಕ್ತರಾಗಿ ಬದುಕಲು ಸಾಧ್ಯವಾಗಿದೆ. 2ನೇ ಹಂತದ ಲಸಿಕೆ ಪಡೆಯುವ ಮುಕ್ತಾಯದ ಹಂತದಲ್ಲಿ ನಾವಿದ್ದೇವೆ ವಿದ್ಯಾರ್ಥಿಗಳು ನಿರ್ಲಕ್ಷ ಭಾವನೆ ತಾಳದೆ ಲಸಿಕೆ ಪಡೆದು ಆರೋಗ್ಯವಂತರಾಗಿ ತಮ್ಮ ಬದುಕನ್ನು ರೂಪಿಸಿಕೂಳ್ಳಲು ಮುಂದಾಗಬೇಕು ಎಂದರು.
ರಾಷ್ಟ್ರೀಯ ಸೇವೆಯ ಯೋಜನಾಧಿಕಾರಿ ಡಾ.ಸರಸ್ವತಿ ಬಮ್ಮನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನಲ್ಲಿ ಮೂದಲನೆ ಹಂತ ಯಶಸ್ವಿಯಾಗಿದೆ. ಎನ್ ಎಸ್ ಎಸ್ ವಿಧ್ಯಾರ್ಥಿಗಳು ಯೋಜನೆಯ ಉದ್ದೇಶವನ್ನು ಯಶಸ್ವಿಯಾಗಿ ನೆರೆವೆರಿಸಿ ರಾಷ್ಟ್ರೀಯ ಸೇವಾ ಕಾರ್ಯದಲ್ಲಿ ಪಾಲ್ಗೂಂಡು ತಮ್ಮ ಮಾನವೀಯತೆ ಮೇರೆದಿದ್ದಾರೆ ಅದಕ್ಕಾಗಿ ವಿಧ್ಯಾರ್ಥಿ ಸಮುದಾಯಕ್ಕೆ ಅಭಿನಂದಿಸುವುದಾಗಿ ಹೇಳಿದ ಅವರು 2 ನೇ ಹಂತದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರೇರಣೆ ನೀಡಿ ಯೋಜನೆ ಯಶಸ್ವಿಗೂಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೂಂಡಿದ್ದ ಪ್ರೊ. ಸಿ.ಎ ಹರಿಹರ ಅವರು ಸಮಾಜ ಮುಖಿ ಸೇವಾ ಕಾರ್ಯದಲ್ಲಿ ಎನ್ ಎಸ್ ಎಸ್ ಸೇವಾ ಯೋಜನೆಯ ಪಾತ್ರ ಕುರಿತಂತೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಐ ಕ್ಯೂ ಎ.ಸಿ ಸಂಯೋಜಕ ಡಾ. ಮಧುಕುಮಾರ ಎಸ್, ತಾಲೂಕಾ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ, ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.