ರಾಣೆಬೆನ್ನೂರ

ದುಂದು ವೆಚ್ಚ ಮಾಡಿ ವ್ಯರ್ಥ ಮಾಡುವ ಬದಲು ಕಲಿಕಾ ವಸ್ತು ವಿತರಣೆ

ದುಂದು ವೆಚ್ಚ ಮಾಡಿ ವ್ಯರ್ಥ ಮಾಡುವ ಬದಲು ಕಲಿಕಾ ವಸ್ತು ವಿತರಣೆ
ರಾಣಿಬೆನ್ನೂರ: ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಸದಸ್ಯ ಪರಮೇಶ ಗೂಳಣ್ಣನವರ ಮಾತನಾಡಿದರು.

ರಾಣಿಬೆನ್ನೂರ 23:  23 ಜನ್ಮ ದಿನದಂದು ದುಂದು ವೆಚ್ಚ ಮಾಡಿ ವ್ಯರ್ಥ ಮಾಡುವ ಬದಲು ಅದೇ ಹಣದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ವಸ್ತುಗಳನ್ನು ಕೊಡಲು ನಿರ್ಧರಿಸಿರುವೆ ಎಂದು ಎಪಿಎಂಸಿ ಸದಸ್ಯ ಪರಮೇಶ ಗೂಳಣ್ಣನವರ ಹೇಳಿದರು.  

ನಗರದ ಸೊಪ್ಪಿನಪೇಟೆಯ ಅವರ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.22 ರಂದು 45 ನೇ ವರ್ಷಕ್ಕೆ ಪಾದಾರೆ​‍್ಣ ಮಾಡುತ್ತಿರುವೆ. ಇದರ ಪ್ರಯುಕ್ತ ನಗರದ ಸರಕಾರಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಗಳ ಸುಮಾರು 1500 ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕ, ಜಾಮೆಟ್ರಿ ಬಾಕ್ಸ್‌ ಒಳಗೊಂಡ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸುವ ಚಿಂತನೆಯಿದೆ ಎಂದರು.  

ಜು. 23 ರಂದು ಶುಕ್ರವಾರ ಬೆಳಗ್ಗೆ 11 ಕ್ಕೆ ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವೆ. ಸ್ಥಳೀಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಸಾನಿಧ್ಯ ವಹಿಸುವರು. ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಆರ್‌.ಶಂಕರ್, ಶಾಸಕ ಅರುಣಕುಮಾರ ಪೂಜಾರ, ಡಿವೈಎಸ್‌ಪಿ ಸುರೇಶ, ತಹಶೀಲ್ದಾರ ಶಂಕರ್ ಜಿ.ಎಸ್, ಬಿ.ಓ ಗುರುಪ್ರಸಾದ, ನಗರಸಭೆ ಪೌರಾಯುಕ್ತ ಡಾಽ ಮಹಾಂತೇಶ್ ಎನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.  

ಎಪಿಎಂಸಿ ಸದಸ್ಯ ರಾಜೇಂದ್ರ ಬಸೆನಾಯ್ಕರ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಅಡ್ಮನಿ ಇದ್ದರು.  

ಸುದ್ದಿ ಓದಿ