ರಾಣೆಬೆನ್ನೂರ

ಪಂಚಾಯತ ರಾಜ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ: ಪರಿಹಾರಕ್ಕೆ ಆಗ್ರಹ

ಪಂಚಾಯತ ರಾಜ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ: ಪರಿಹಾರಕ್ಕೆ ಆಗ್ರಹ

ಲೋಕದರ್ಶನ ವರದಿ 

ರಾಣೇಬೆನ್ನೂರು 18:  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ (ಆರ್‌ಡಿಪಿಆರ್)  ಬೇಜವಾಬ್ದಾರಿ ತನದಿಂದ ಈ ಸ್ವತ್ತಿನ ಸಮಸ್ಯೆ ನಿತ್ಯವು ಉಲ್ಭಣವಾಗುತ್ತಿದ್ದು ಇದರಿಂದ ನಾಗರೀಕರು ಅನೇಕ ರೀತಿಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಕೂಡಲೇ ಈ ಸಮಸ್ಯೆ ಪರಿಹರಿಸಲು ಮುಂದಾಬೇಕು. ಇಲ್ಲವಾದಲ್ಲಿ ನವೆಂವರ್ 25 ರ ಗುರುವಾರ ದಿವಸ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳು ಮತ್ತು ನಗರದಲ್ಲಿರುವ ತಾಲೂಕಾ ಪಂಚಾಯತ ಕಛೇರಿಗೆ ಬೀಗ ಜಡಿದು ಪ್ರತಿಭಟಿಸಲು ಸಂಘಟನೆ ಮುಂದಾಗಿರುವುದಾಗಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಹೇಳಿದ್ದಾರೆ.  

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಗಂಭಿರ ಪತ್ರ ಬರೆದಿರುವ ಪಾಟೀಲ ಅವರು ಪ್ರತಿಭಟನೆಗೆ ನಿರ್ಧರಿಸಿರುವ ಕುರಿತಂತೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಗ್ರಾಮೀಣ ಭಾಗದ ಆಸ್ತಿ, ನಿವೇಶನ, ಮನೆಗಳ ಖರೀದಿಗೆ ಸಂಬಂಧಿಸಿದಂತೆ ಅತ್ಯಂತಅವಶ್ಯಕವಾಗಿ ಬೇಕಾದ ಇ ಸ್ವತ್ತು (ಋಣಭಾರ) ಪ್ರಮಾಣ ಪತ್ರ ಪೂರೈಕೆ ಕಳೆದ 20 ದಿವಸಗಳಿಂದ ಇಡೀ ರಾಜ್ಯದಲ್ಲಿ ದೊರಕದೆ ಇರುವುದರಿಂದ ಗ್ರಾಮೀಣ ನಾಗರೀಕರಿಗೆ ಅತೀವ ತೊಂದರೆಯಾಗಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆಯ ಬೇಜವಬ್ದಾರಿ  ತನವೇ ಮುಖ್ಯ ಕಾರಣವಾಗಿದೆ ಎಂದು ಪ್ರಕಟಣೆಯಲ್ಲಿ ಗಂಭಿರವಾಗಿ ಆರೋಪಿಸಿದ್ದಾರೆ.  

ಲಾಗಿನ್ ತೊಂದರೆ ಮತ್ತು ಸಾಪ್ಟವೇರ ಅಪಡೇಟ್‌ಗಳ ಕಾರಣ ಹೇಳುತ್ತಾ ಇಂದು ಸರಿ ಪಡಿಸುತ್ತೇವೆ ನಾಳೆ ಸರಿಪಡಿಸುತ್ತೇವೆಂದು ಹೇಳುತ್ತಾ ಇದುವರೆಗೆ ಸಮಸ್ಯೆ ಬಗೆ ಹರಿಸಿದೆ ಜನರ ಜೋತೆಗೆ ನಿತ್ಯವು ಚಲ್ಲಾಟವಾಡುತ್ತ್ತಿದ್ದಾರೆ ಈ ಇಲಾಖೆಯಲ್ಲಿ ಹೇಳೊರಿಲ್ಲ ಕೇಳೊರಿಲ್ಲ ಎನ್ನುವಂತ್ತಾಗಿದೆ. 

  ಇಲಾಖೆಗೆಂದೆ ಒಬ್ಬ ಕ್ಯಾಬಿನೆಟ್ ಮಂತ್ರಿ ಅನೇಕ ಐಎಎಸ್, ಕೆಎಎಸ್ ಅಧಿಕಾರಿಗಳ ತಂಡವೇ ಇದಕ್ಕೆ ಇದ್ದರೂ ಸಹ ಇಂತಹ ದೊಡ್ಡ ಪ್ರಮಾಣದ ಸಮಸ್ಯೆ ಬಗೆ ಹರಿಸಲು ವಿಫಲರಾಗಿರುವುದು ಸರಕಾರದ ಆಡಳಿತಕ್ಕೆ ಹಿಡದ ಕೈಗನ್ನಡಿಯಾಗಿದೆ ಎಂದು  ಪಾಟೀಲ  ಕಿಡಿ ಕಾರಿದ್ದಾರೆ. ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ನಿವೇಶನ, ಮನೆ, ಖಾಲಿ ಜಾಗಾ, ಕಣ ಸೇರಿದಂತೆ ಇತರೆ ಆಸ್ತಿಗಳ ಖರೀದಿಯಿಂದ ಸಬ್‌ರಜಿಸ್ಟರ್ ಕಚೇರಿಗಳಿಗೆ ದಿನನಿತ್ಯ ಬರುತ್ತಿದ್ದ ಕೋಟಿಗಳ ಲೆಕ್ಕದ ಆದಾಯವು ನಿಂತುಹೋಗಿದೆ. ಗ್ರಾಮೀಣ ಭಾಗದ ನಾಗರಿಕರು ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ತಮ್ಮ ಇಲಾಖೆಯವರೇ ಹೇಳುತ್ತಿರುವ ಲಾಗಿನ್ ಸಮಸ್ಯೆ ಮತ್ತು ಸಾಪ್ಟವೇರ ಸಮಸ್ಯೆಯನ್ನು ಬಗೆ ಹರಿಸಿ ಗ್ರಾಮೀಣಜನರ ಸೇವೆಗೆ ಅನಕೂಲ ಕಲ್ಪಿಸಿಕೊಡಬೇಕೆಂದು ಪತ್ರದಲ್ಲಿ ಆಗ್ರಹಿಸಿರುವ ರವೀಂದ್ರಗೌಡ ಅವರು ಏಕಕಾಲಕ್ಕೆ 25 ರಂದು ಬೀಗ ಜಡಿದು ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿರುವುದಾಗಿ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. 


ಸುದ್ದಿ ಓದಿ